ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸೀಲ್‍ಡೌನ್ ಹಾಕುವ ಮತ್ತು ತೆರವುಗೊಳಿಸುವ ಕೆಲಸಕ್ಕೆ ಖಾಸಗಿಯವರಿಗೆ ಟೆಂಡರ್ ಕೊಡಬೇಕು ಎಂದು ವಿರೋಧಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಹೆಚ್ಚು ಹರಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆದೇಶದ ಪ್ರಕಾರ ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಗಳು ವಾಸ ಮಾಡುವ ಮನೆಯನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ. ಈ ಕೆಲಸವನ್ನು ನಮ್ಮ ಪೌರಕಾರ್ಮಿಕರು, ಆರೋಗ್ಯಾಧಿಕಾರಿಗಳು ಮಾಡುತ್ತಾ ಬಂದಿದ್ದಾರೆ.
ಇಗೀಗ ಮಳೆಗಾಲ ಆರಂಭವಾಗಿದ್ದು, ಚರಂಡಿಗಳಲ್ಲಿ ಕಸ ಹೆಚ್ಚಾಗಿದೆ. ಇದರ ಸ್ವಚ್ಛತಾ ಕಾರ್ಯ ಮಾಡಬೇಕಿದೆ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು, ಒಂದು ವಾರ್ಡ್‍ನಲ್ಲಿ 6 ರಿಂದ 7 ಪೌರ ಕಾರ್ಮಿಕರ ಮಾತ್ರ ಇರುತ್ತಾರೆ. ಅವರ ಕೆಲಸಗಳೇ ಹೆಚ್ಚಾಗಿದೆ. ಇದರ ನಡುವೆ ಸೀಲ್‍ಡೌನ್ ಮಾಡುವುದು ಮತ್ತು ತೆಗೆಯುವ ಕೆಲಸ ಹೊರೆಯಾಗುತ್ತಿದೆ.
ಇದುವರೆಗೂ ಸುಮಾರು 260ಕ್ಕೂ ಹೆಚ್ಚು ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಆದ್ದರಿಂದ ಪೌರ ಕಾರ್ಮಿಕರಿಗೆ ಹೊರೆ ತಪ್ಪಿಸಲು ಖಾಸಗಿಯವರಿಗೆ ಟೆಂಡರ್ ಮೂಲಕ ಖಾಸಗಿಯವರಿಗೆ ಸೀಲ್‍ಡೌನ್ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ ಸೇರಿದಂತೆ ಹಲವರಿದ್ದರು.