ಶಿವಮೊಗ್ಗ: ದೇಶದಲ್ಲಿ ನಷ್ಟದಲ್ಲಿರುವ ಕಾರ್ಖಾನೆಗಳ ಪೈಕಿ VISL ಕಾರ್ಖಾನೆಯೂ ಒಂದಾಗಿದೆ. ಇದನ್ನು ಉಳಿಸಲು ಶ್ರಮಿಸುತ್ತಿದ್ದೇವೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2009ರಿಂದ 2019ರವರೆಗೆ ನಿರಂತರವಾಗಿ ವಾರ್ಷಿಕ 100 ಕೋಟಿ ರೂ. ನಷ್ಟ ಅನುಭವಿಸುತ್ತ ಬಂದಿರುವ VISL ಕಾರ್ಖಾನೆಗೆ ಮತ್ತೆ ಬಂಡವಾಳ ಹೂಡುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಲಾಗಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದರು.
ಬಳಿಕ ಕೇಂದ್ರದ ಕೃಷಿ ಸಮ್ಮಾನ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರೈತರಲ್ಲಿ ವಿನಂತಿಸಿದರು. ಪ್ರತಿ ತಾಲೂಕಿಗೂ 30 ಕೋಟಿ ಹಣ ದೊರೆಯುತ್ತದೆ. ಈಗಾಗಲೇ ಮೊದಲ ಕಂತಾಗಿ ಕೇಂದ್ರ ಸರ್ಕಾರ 12 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಈ ಯೋಜನೆಗೆ ರೈತರು ಅರ್ಜಿಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.