ಶಿವಮೊಗ್ಗ: ಮತದಾರರ ಪಟ್ಟಿ ದುರ್ಬಳಕೆ ಪ್ರಕರಣವನ್ನು ಪೊಲೀಸರಿಗೆ ಮುಕ್ತವಾಗಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೇಸಾರ್ಟ್ ನಲ್ಲಿ ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ರ್ದುಬಳಕೆ ಕುರಿತು ತನಿಖೆ ತೀವ್ರವಾಗಿ ನಡೆಯುತ್ತಿದೆ. ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗುತ್ತದೆ ಎಂದರು.
ಶರಾವತಿ ಸಂತ್ರಸ್ತರ ಹೋರಾಟ ವಿಚಾರ: ಶರಾವತಿ ಸಂತ್ರಸ್ತರ ಕುರಿತಾದ ವಿಚಾರವನ್ನು ಡಿಸಿ ಅವರಿಂದ ಮಾಹಿತಿ ಪಡೆದಿದ್ದೇನೆ. ಈ ಹಿಂದೆ ನೋಟಿಪಿಕೇಷನ್ ಆಗಿರುವ ಕುರಿತಾದ ಮಾಹಿತಿಯನ್ನು ಡಿಸಿಯಿಂದ ತರಿಸಿಕೊಳ್ಳುತ್ತೇನೆ ಎಂದರು. ಡಿಸೆಂಬರ್ 3ನೇ ವಾರದೊಳಗೆ ವರದಿ ಕೊಡಲು ಡಿಸಿಗೆ ಸೂಚಿಸಿದ್ದೇನೆ. ಡಿಸಿ ಅವರು ವರದಿ ಕೊಟ್ಟ ತಕ್ಷಣ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ಹಿಂದಿನ ಸರ್ಕಾರ ಅನುಮತಿ ಪಡೆಯದ ಕಾರಣ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ ಎಂದರು. ಈಗಾಗಲೇ ಸಂಬಂಧಿಸಿದ ಕೇಂದ್ರ ಸಚಿವರಿಗೆ ವಿಷಯ ತಿಳಿಸಲಾಗಿದೆ. ಅದಷ್ಟು ಬೇಗ ಅನುಮತಿ ಪಡೆದು ಸಮಸ್ಯೆ ಪರಿಹರಿಸುತ್ತೇವೆ ಎಂದರು.
ಸರ್ವಪಕ್ಷ ಸಭೆ ಕರೆಯಲಾಗುತ್ತದೆ: ಗಡಿ ವಿಚಾರದಲ್ಲಿ ನನ್ನ ನಿಲುವು ತಿಳಿಸಿದ್ದೇನೆ ಎಂದ ಸಿಎಂ, ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ನಮಗೆ ಕಾನೂನಿನ ಗಟ್ಟಿಯಾದ ನೆಲೆಗಟ್ಟಿದೆ. ನಮ್ಮ ರಾಜ್ಯದ ವಿಚಾರದಲ್ಲಿ ಪರ್ಫೆಕ್ಟ್ ಆಗಿದ್ದೇವೆ. ಈ ಬಗ್ಗೆ ಶೀಘ್ರದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುತ್ತದೆ, ಕಾನೂನು ತಜ್ಞರ ಜೊತೆ ಚರ್ಚಿಸಿ ಸಮರ್ಥವಾಗಿ ವಾದ ಮಂಡಿಸುತ್ತೇವೆ ಎಂದು ತಿಳಿಸಿದರು.
ಮಂಗಳೂರು ಪ್ರಕರಣ: ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ. ಇಂತಹ ಪ್ರಕರಣ ಇದ್ದಾಗ ಯುಎಪಿಎ ಅಡಿ ಕೇಸ್ ದಾಖಲಾಗಬೇಕು, ಇಂತಹ ಪ್ರಕರಣ ಎನ್ಐಎಗೆ ವಹಿಸಬೇಕು ಎಂದರು. ಮಂಗಳೂರು ಪ್ರಕರಣವನ್ನು 24 ಗಂಟೆಯಲ್ಲಿ ನಮ್ಮ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದರು.
ಬಗರ್ ಹುಕುಂ ಸಮಸ್ಯೆ ವಿಚಾರ: ಡೀಮ್ಡ್ ಫಾರೆಸ್ಟ್ ವಿಚಾರ ಕುರಿತಂತೆ ಸರ್ಕಾರ ಒಂದು ನಿರ್ಣಯ ಕೈಗೊಂಡಿದೆ ಎಂದ ಅವರು
ಸುಮಾರು 6 ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ಲ್ಯಾಂಡ್ ಅನ್ನು ಕಂದಾಯ ಇಲಾಖೆಗೆ ವಹಿಸಲಾಗಿದೆ. ಡೀಮ್ಡ್ ಫಾರೆಸ್ಟ್ ಮಲೆನಾಡು ಭಾಗದಲ್ಲಿ ಹೆಚ್ಚಿದೆ ಎಂದರು.
ನಂತರ ಮಾತನಾಡಿದ ಸಿಎಂ ಗುಜರಾತ್ ಚುನಾವಣೆ ನಂತರ ವರಿಷ್ಠರ ಭೇಟಿ ಮಾಡುತ್ತೇನೆ. ವರಿಷ್ಠರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ನಂತರ ತೀರ್ಮಾನ ಮಾಡಲಾಗುವುದು ಎಂದರು.
ಇದನ್ನೂ ಓದಿ:ಬಿಎಸ್ವೈ ತವರು ಜಿಲ್ಲೆಯಲ್ಲಿ ರಾಜ್ಯ ಪ್ರಶಿಕ್ಷಣ ವರ್ಗ: ಶಿವಮೊಗ್ಗಕ್ಕೆ ತೆರಳಿದ ಬಿಜೆಪಿ ನಾಯಕರು