ETV Bharat / state

ಆಗಸ್ಟ್​ 10 ರಿಂದ ವಿಐಎಸ್​ಎಲ್​ ಕಾರ್ಖಾನೆ ಪುನಾರಂಭ - ವಿಐಎಸ್​ಎಲ್​ ಕಾರ್ಖಾನೆ ಪುನರಾರಂಭ

5 ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನರಾರಂಭಗೊಳ್ಳಲಿದೆ.

ವಿಐಎಸ್​ಎಲ್​ ಕಾರ್ಖಾನೆ ಪುನರಾರಂಭ
ವಿಐಎಸ್​ಎಲ್​ ಕಾರ್ಖಾನೆ ಪುನರಾರಂಭ
author img

By

Published : Aug 3, 2023, 8:19 AM IST

Updated : Aug 3, 2023, 5:13 PM IST

ಆಗಸ್ಟ್​ 10 ರಿಂದ ವಿಐಎಸ್​ಎಲ್​ ಕಾರ್ಖಾನೆ ಪುನಾರಂಭ

ಶಿವಮೊಗ್ಗ: ಕಳೆದ 5 ತಿಂಗಳ ಕಾಲ ಸ್ಥಗಿತವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್​ಎಲ್)​ ಕಾರ್ಖಾನೆ ಆಗಸ್ಟ್ 10 ರಿಂದ ಮತ್ತೆ ಕಾರ್ಯಾರಂಭಿಸಲಿದೆ. ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನಂತೆ ಸೇಲ್​ನ ಮೂರು ಕಾರ್ಖಾನೆಗಳಾದ ಭದ್ರಾವತಿಯ ವಿಐಎಸ್ಎಲ್, ತಮಿಳುನಾಡಿನ ಸೇಲಂ ಕಾರ್ಖಾನೆ ಹಾಗೂ ದುರ್ಗಾಪುರನ ಕಾರ್ಖಾನೆಯನ್ನು ಮುಚ್ಚಲು ಸೂಚಿಸುತ್ತು. ಕಳೆದ ಫೆಬ್ರವರಿಯಲ್ಲಿ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸಿದ್ದವು. ಸದ್ಯ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಪುನಾರಂಭ ಮಾಡಲು ಸೂಚಿಸಿದೆ.

ಈ ಕುರಿತು ಕಾರ್ಮಿಕ‌ ಸಂಘದ ಅಧ್ಯಕ್ಷರಾದ ಜಗದೀಶ್ ಮಾಧ್ಯಮದ ಜೊತೆ ಮಾತನಾಡಿ, ಕಾರ್ಖಾನೆ ಪುನರಾಂಭವಾಗುತ್ತಿರುವುದು ಒಂದು ಶುಭ ಸೂಚನೆಯಾಗಿದೆ. ಆದರೆ, ಇದರಿಂದ ನಮಗೆ ತೃಪ್ತಿ ಇಲ್ಲ. 2016ರಲ್ಲಿ ಕಾರ್ಖಾನೆಯನ್ನು ಖಾಸಗಿಕರಣ ಮಾಡಬೇಕು ಎಂದು ಆದೇಶ ಬಂದಾಗ ಕಾರ್ಮಿಕ‌ ಸಂಘಟನೆಯು ಸುಮಾರು 73 ದಿನಗಳ ಹೋರಾಟ ನಡೆಸಿತ್ತು.

ಅಂದು ನಮ್ಮ ಹೋರಾಟ ನಡೆಯುತ್ತಿದ್ದರೂ ಸಹ ಕಾರ್ಖಾನೆಯು ಮುಚ್ಚುವ ಹಂತಕ್ಕೆ ತಲುಪಿತ್ತು. ನಂತರ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಅಭಿವೃದ್ದಿ ಪಡಿಸಬೇಕೆಂದು ಹೇಳಿದಾಗಲೂ ಸಹ ನಾವು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದೆವು. ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ನೂತನ ಯಂತ್ರೋಪಕರಣಗಳು ಇಲ್ಲದ ಕಾರಣ ಕಾರ್ಖಾನೆ ಖರೀದಿ ಮಾಡಲು ಯಾರೂ ಮುಂದೆ ಬರಲಿಲ್ಲ. ಇದರಿಂದ ಖಾಸಗೀಕರಣ ಪ್ರಕ್ರಿಯೆ ಸಂಪೂರ್ಣ ನಿಂತು ಹೋಯಿತು. ಇದರಿಂದ ಕಾರ್ಖಾನೆ ಮುಚ್ಚುವ ಹಂತ ತಲುಪಿತ್ತು.

ನಂತರ ಕಾರ್ಖಾನೆಯನ್ನು ಉಳಿಸಲು ಸರ್ಕಾರದ ಜೊತೆ ಸೇತುವೆಯಾಗಿ ಇದ್ದವರು ಸಂಸದ ಬಿ ವೈ ರಾಘವೇಂದ್ರ. ನಮ್ಮ ಹೋರಾಟಕ್ಕೆ ರಾಘವೇಂದ್ರ ಅವರು ಸ್ಪಂದಿಸಿ, ಕಾಲಕಾಲಕ್ಕೆ ನಮ್ಮ ಅಂಕಿ - ಅಂಶಗಳನ್ನು ಪಡೆದುಕೊಂಡರು. ನಂತರ ಪಾಲಿಸಿ ವಿಷಯಗಳಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಎಂಬುದನ್ನು ತಿಳಿದು ಕೇಂದ್ರದ ಸಚಿವರುಗಳ ಜೊತೆ ಮಾತನಾಡಿ, ಕಾರ್ಖಾನೆಯನ್ನು ಪುನಾರಂಭ ಮಾಡಲು ಅವರು ಯಶಸ್ವಿಯಾಗಿದ್ದಾರೆ.

ಕಾರ್ಖಾನೆ ಆಧುನಿಕರಣ ಅವಶ್ಯ: ಕಾರ್ಖಾನೆಯು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಆಧುನಿಕರಣಗೊಳ್ಳಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಮೊದಲು 1 ಸಾವಿರ ಕೋಟಿ ನಂತರ 3 ಸಾವಿರ ಕೋಟಿ ರೂ ಬೇಡಿಕೆ ಇಟ್ಟಿದ್ದೆವು. ನಂತರ ಮೇಕಾನ್ ರವರು ಎರಡು ವರದಿಯನ್ನು ಸಿದ್ದಪಡಿಸಿದ್ದರು. ಮೊದಲನೇಯದು 3,800 ಕೋಟಿ ರೂ ದೀರ್ಘ ಕಾಲದ ವರದಿ ಹಾಗೂ ಕಡಿಮೆ ಅವಧಿ ವರದಿಗೆ 1,800 ಕೋಟಿ ರೂ ಕೇಳಿದ್ದರು.

ವಾರ್ಷಿಕ 100 ಕೋಟಿ ಲಾಭ: ಇವೆಲ್ಲಾ ಆಗದೆ ಹೋದಾಗ ಕನಿಷ್ಠ ಬಂಡವಾಳವಾದ ಗ್ರೀನ್ ಸ್ಟೀಲ್ ರೂಟ್ ತಂತ್ರಜ್ಞಾನ ಬಳಸಿಕೊಂಡು ಕನಿಷ್ಟ 250 ರಿಂದ 300 ಕೋಟಿ ರೂ ಬಂಡವಾಳ ಹಾಕಿದ್ರೆ ವರ್ಷಕ್ಕೆ‌ ಕನಿಷ್ಟ 50 ರಿಂದ 100 ಕೋಟಿ ರೂ ಲಾಭಕ್ಕೆ ತೆಗೆದುಕೊಂಡು ಹೋಗಬಹುದು. ಇದರಿಂದ ನಾವು ಸಂಸದರ ಜೊತೆಗೊಡಿ ಕಾರ್ಖಾನೆಗೆ ಕನಿಷ್ಠ 100 ಕೋಟಿ ರೂ ಹಣ ತರುತ್ತೇವೆ ಎಂದು ಜಗದೀಶ್ ಹೇಳಿದರು.

ಕಾರ್ಮಿಕ ಸಂಘದ ಕಾರ್ಯದರ್ಶಿ ಬಸಂತ ಕುಮಾರ್ ಪ್ರತಿಕ್ರಿಯೆ ನೀಡಿ, ಸೇಲ್ ವಶಕ್ಕೆ ಪಡೆದ ನಂತರ ಭಾರತೀಯ ಉಕ್ಕು ಪ್ರಾಧಿಕಾರ ಇದಕ್ಕೆ ಬಂಡವಾಳವನ್ನೆ ಹಾಕಲಿಲ್ಲ. ಕಾಲಕಾಲಕ್ಕೆ ಕಾರ್ಖಾನೆಯನ್ನು ಉನ್ನತಿಕರಿಸಿದ್ದರೆ ಕಾರ್ಖಾನೆ ನಷ್ಟಕ್ಕೆ ಹೋಗುತ್ತಿರಲಿಲ್ಲ ಎಂದರು.

ಗುತ್ತಿಗೆ ಕಾರ್ಮಿಕ‌ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಭದ್ರಾವತಿ ಜನತೆಯ ಸಹಕಾರದಿಂದ ಹೋರಾಟ ನಡೆಸಿದ ಫಲ ಇಂದು ಕಾರ್ಖಾನೆಯು ಮತ್ತೆ ಉತ್ಪಾದನೆಗೆ ಬಂದಿದೆ. ಕಾರ್ಖಾನೆ ಮತ್ತೆ ಉತ್ಪಾದನೆ ಮಾಡಿಸುವಲ್ಲಿ ಸಂಸದರ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಇದನ್ನೂ ಓದಿ: VISL Factory: ಆಗಸ್ಟ್ 10 ರಿಂದ ಪುನಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ: ಸಂಸದ ಬಿ ವೈ ರಾಘವೇಂದ್ರ

Last Updated : Aug 3, 2023, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.