ETV Bharat / state

VISL ಕಾರ್ಖಾನೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಯದುವೀರ್ ಒಡೆಯರ್ ಚಾಲನೆ - VISL ಕಾರ್ಖಾನೆಯ ಶತಮಾನೋತ್ಸವ

ವಿಎಸ್​ಎಲ್​ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೈಸೂರು ಸಂಸ್ಥಾನದ ರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

visl ಕಾರ್ಯಕ್ರಮಕ್ಕೆ ಯದುವೀರ್ ಒಡೆಯರ್ ಚಾಲನೆ
visl ಕಾರ್ಯಕ್ರಮಕ್ಕೆ ಯದುವೀರ್ ಒಡೆಯರ್ ಚಾಲನೆ
author img

By ETV Bharat Karnataka Team

Published : Nov 4, 2023, 11:03 PM IST

VISL ಕಾರ್ಖಾನೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಯದುವೀರ್ ಒಡೆಯರ್ ಚಾಲನೆ

ಶಿವಮೊಗ್ಗ: ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಗಿಂದು ಶತಮಾದ ಸಂಭ್ರಮ. ಇದರಿಂದ ವಿಐಎಸ್ಎನ್​ನ ಮಾಜಿ ನೌಕರರರು ಹಾಗೂ ನೌಕರರು ಸೇರಿದಂತೆ ಎಲ್ಲರೂ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಭದ್ರಾವತಿಯ ವಿಐಎಸ್ಎಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನದ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜೀಗಳು, ಆದಿಚುಂಚನಗಿರಿಯ ಡಾ.ನಿರ್ಮಲನಂದ ಸ್ವಾಮಿಜೀಗಳು, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಹಾಗೂ ಕಲ್ಮಠದ ಮುರುಘಾರಾಜೇಂದ್ರ ಸ್ವಾಮಿಜೀಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿ.ಆರ್.ಎಲ್ ಅಧ್ಯಕ್ಷರಾದ ವಿಜಯ ಸಂಕೇಶ್ವರ್ ಹಾಗೂ ವಿಶ್ವೇಶ್ವರಯ್ಯ ಅವರ ಮರಿಮಗ ಶೇಷಾದ್ರಿ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ಮೈಸೂರು ಅರಸರ ಗುಣಗಾನ: ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಶತಮಾನ ಎಂಬುದು ಸಾಧಾರಣ ಮೈಲಿಗಲ್ಲು ಅಲ್ಲ. ಯಾವುದೇ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಸಂಗತಿ. ನಾವಿಲ್ಲಿ ಸೇರಿಸಿರುವುದು ಈ ನೆಲದ ಹೆಮ್ಮೆಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯ ಶತಮಾನೋತ್ಸವ ಸಂಭ್ರಮಕ್ಕಾಗಿ. ಈ ದೇಶದ ಮೊಟ್ಟ‌ ಮೊದಲ‌ ಇಂಟಿಗ್ರೇಟೆಡ್ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ ಇದಾಗಿತ್ತು. ಈ ಕಾರ್ಖಾನೆ ಇತಿಹಾಸವು ನವಭಾರತದ ಇತಿಹಾಸವಾಗಿದೆ. ಈ ನಾಡಿನ ಹೆಮ್ಮಯ ಮೈಸೂರು ಅರಸರ ನೀಡದ ಕೊಡುಗೆ ಆಗಿದೆ ಎಂದು ಗುಣಗಾನ ಮಾಡಿದರು.

ನಿಮ್ಮೆಲ್ಲರ ಸಹಕಾರ ಬೇಕು- ಸಚಿವ ಮಧು ಬಂಗಾರಪ್ಪ: ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, 100 ವರ್ಷದ ಸಂಭ್ರಮ ಒಂದು ಕಡೆಯಾದ್ರೆ, ನನಗೆ ಒಳಗೊಳಗೆ ಮುಜುಗರವಿದೆ. ಕಾರ್ಖಾನೆ ಉಳಿಸಲು ಭದ್ರಾವತಿ ಶಾಸಕರಾದ ಸಂಗಮೇಶ್ವರ್ ಅವರು 150 ಎಕರೆ ಗಣಿ ಭೂಮಿಯನ್ನು ಕೊಡಿಸಲು ಪ್ರಯತ್ನ ಮಾಡಿದ್ರು, ಅದೇ ರೀತಿ ಯಡಿಯೂರಪ್ಪ ಅವರು ಸಹ ಸಂಸದರಾದಾಗ ಕೇಂದ್ರದಲ್ಲಿ ಪ್ರಯತ್ನ ಮಾಡಿದ್ದಾರೆ. ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ನಿಮ್ಮ ಸಹಕಾರ ನೀಡಿದರೆ ಉಳಿಸುತ್ತೇವೆ ಎಂದರು. ಅದೇ ರೀತಿ ಕೇಂದ್ರ ಸರ್ಕಾರ ಸಹ ಸಹಕರಿಸಬೇಕಿದೆ. ನಾವೆಲ್ಲಾ ವಸ್ತು ಸ್ಥಿತಿಯ ಮೇಲೆ ಕೆಲಸ ಮಾಡಬೇಕಿದೆ ಎಂದರು.

ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಮೈಸೂರು ಮಹಾರಾಜರು 1904 ರಿಂದ 1940 ರ ವರೆಗೂ ರಾಜ್ಯಕ್ಕೆ ಅನೇಕ‌ ಕೂಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಭದ್ರಾವತಿಯ ವಿಐಎಸ್ಎಲ್ ಹಾಗೂ ಎಂಪಿಎಂ ಹಾಗೂ ತಾಳುಗುಪ್ಪದ ತನಕ ರೈಲು ಓಡಾಡಿದ್ದು ರಾಜರ ಕೊಡುಗೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಜೋಗದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ತ ರಾಜರ ಕೊಡುಗೆ ಆಗಿದೆ. ವಿಐಎಸ್ಎಲ್​ನ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಮೈಸೂರಿನ ಯದುವೀರ ಜಯದತ್ತ ಚಾಮರಾಜ ಒಡೆಯರ್ ಅವರು ಆಗಮಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂಗಾಂಗ ಕಸಿಗೆ ಹೆಚ್ಚಿನ ಬೇಡಿಕೆ: ಕೊರತೆ ನಿವಾರಿಸಲು ''ಆರ್ಗನ್ ಡೋನರ್ಸ್ ನೀತಿ'' ಜಾರಿಗೆ ಸರಕಾರದ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.