ಶಿವಮೊಗ್ಗ: ಅರಣ್ಯಾಧಿಕಾರಿ ಕ್ರಮವನ್ನು ಖಂಡಿಸಿ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಉಂಬ್ಳೆಬೈಲು ವಲಯದಲ್ಲಿ ಬರುವ ಅರಣ್ಯದ ಪ್ರದೇಶದಲ್ಲಿ ಐದಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೈಪ್ಲೈನ್ ಆಳವಡಿಸಲಾಗಿದೆ. ಪೈಪ್ಲೈನ್ ಅಳವಡಿಕೆಗೆ ಈ ಹಿಂದೆ ಅರಣ್ಯಾಧಿಕಾರಿಗಳು ಒಪ್ಪಿಗೆ ನೀಡಿದ್ರು. ಆದರೆ, ಈಗಿರುವ ಅರಣ್ಯಾಧಿಕಾರಿ ಮಹೇಶ್ ನಾಯ್ಕ ಅವರು ಕುಡಿಯುವ ನೀರಿನ ಪೈಪ್ಲೈನ್ ತೆರವುಗೊಳಿಸುವಂತೆ ಆದೇಶಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅರಣ್ಯಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಉಂಬ್ಳೆಬೈಲು ವ್ಯಾಪ್ತಿಗೆ ಒಳಪಡುವ ಐದಾರು ಹಳ್ಳಿಗಳಿಗೆ ಹಾಗೂ ಉಂಬ್ಳೆಬೈಲು ಗ್ರಾಮಕ್ಕೆ ತುಂಗಾ ನದಿಯ ಹಿನ್ನೀರಿನಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನೀರಿನ ಪೂರೈಕೆಗೆ ವಿದ್ಯುತ್ ಸಂಪರ್ಕ ನೀಡುವುದರಿಂದ ವನ್ಯಜೀವಿಗಳು ನೀರು ಕುಡಿಯಲು ಆಗಮಿಸಿದ ವೇಳೆ ಹಾನಿ ಉಂಟಾಗುತ್ತೆ ಎಂದು ನೀರಿನ ಪೈಪ್ ಲೈನ್ ಹಾಗೂ ವಿದ್ಯುತ್ ಲೈನ್ನನ್ನು ತರೆವು ಮಾಡಬೇಕು ಎಂದು ಮೆಸ್ಕಾಂನವರಿಗೆ ಅರಣ್ಯಾಧಿಕಾರಿ ಮಹೇಶ್ ನಾಯ್ಕ ಅವರು ನೋಟಿಸ್ ನೀಡಿದ್ದಾರಂತೆ.