ETV Bharat / state

ಸಾವರ್ಕರ್​ ಭಾವಚಿತ್ರ ಕೀಳುವ ಪ್ರಯತ್ನ ದೇಶದ್ರೋಹಕ್ಕೆ ಸಮ: ಕೇಂದ್ರ ಸಚಿವೆ ಶೋಭ ಕರಂದ್ಲಾಜೆ - Etv bharat kannada

ಸಾವರ್ಕರ್​​ ಹಾಗೂ ಅವರ ಕುಟುಂಬ ದೇಶಕ್ಕಾಗಿ ಹೋರಾಟ ಮಾಡಿದ ಕುಟುಂಬವಾಗಿದೆ. ಅವರನ್ನು ವಿರೋಧಿಸುವವರು ಅಂಡಮಾನ್ ಜೈಲಿಗೆ ತೆರಳಿ ವಾಸ್ತವ ಸಂಗತಿ ಅರಿತುಕೊಳ್ಳಲಿ. ಅವರ ಭಾವಚಿತ್ರ ತೆಗೆಯುವ ಪ್ರಯತ್ನ ದೇಶದ್ರೋಹಕ್ಕೆ ಸಮ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು.

Kardlanje speak about the Savarkar poster removal
ಕೇಂದ್ರ ಸಚಿವೆ ಶೋಭ ಕರದ್ಲಾಂಜೆ
author img

By

Published : Aug 14, 2022, 7:14 PM IST

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ಕೀಳುವ ಪ್ರಯತ್ನ ಮಾಡಿರುವುದು ದುರಾದೃಷ್ಟಕರ ಸಂಗತಿ. ಈ ಪ್ರಯತ್ನ ದೇಶದ್ರೋಹಕ್ಕೆ ಸಮಾನವಾಗಿದೆ. ದೇಶಕ್ಕಾಗಿ ಹೋರಾಟ ಮಾಡಿದವರು ಯಾರು ಎಂಬ ಚರಿತ್ರೆ ಓದದವರು ಈ ರೀತಿ ಮಾಡಿದ್ದಾರೆ. ಈ ರೀತಿಯ ಅಪಮಾನ ನಿರಂತರವಾಗಿ ನಡೆಯುತ್ತಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವೆ ಶೋಭ ಕರದ್ಲಾಂಜೆ

ಜಿಲ್ಲೆಯ ಈಸೂರು ಗ್ರಾಮದಲ್ಲಿ ಈ ಘಟನೆಗೆ ಸಚಿವೆ ವಿಷಾದ ವ್ಯಕ್ತಪಡಿಸಿದರು. ಸಾವರ್ಕರ್ ಹಾಗೂ ಅವರ ಕುಟುಂಬ ದೇಶಕ್ಕಾಗಿ ಹೋರಾಟ ಮಾಡಿದ ಕುಟುಂಬವಾಗಿದೆ. ಓರ್ವ ಜನಪ್ರತಿನಿಧಿಯ ಪತಿ ಸಾವರ್ಕರ್ ಅವರ ಫೋಟೋ ಕಿತ್ತು ಹಾಕುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ಆ ಜನಪ್ರತಿನಿಧಿಯು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಭಾವಚಿತ್ರ: ಎಸ್​​ಡಿಪಿಐ ಕಾರ್ಯಕರ್ತರ ಆಕ್ರೋಶ, ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.