ಶಿವಮೊಗ್ಗ: ಗೆಜ್ಜೆನಹಳ್ಳಿಯ ಕ್ರಷರ್ನಲ್ಲಿ ನಡೆದ ಅವಘಡದಲ್ಲಿ ಬಿಹಾರ ಮೂಲದ ಕಾರ್ಮಿಕರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗೆಜ್ಜೆನಹಳ್ಳಿಯ ಹಟ್ಟಿ ಲಕ್ಕಮ್ಮ ಹೆಸರಿನ ಕ್ರಷರ್ನಲ್ಲಿ ಬಿಹಾರ ಮೂಲದ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಕ್ರಷರ್ ಮೇಲಿದ್ದ ಮಣ್ಣು ಹಾಗೂ ಟ್ರಾಲಿಯಲ್ಲಿದ್ದ ಕಲ್ಲು ಮೈಮೇಲೆ ಬಿದ್ದು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಬಿಹಾರ ಮೂಲದ ಜಿಕೋಲಾಂಗ್ (25) ಹಾಗೂ ಟ್ರೈನಿಕ್ ಟೋಜ್ (25) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇದರಲ್ಲಿ ಜಿಕೋಲಾಂಗ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಟ್ರೈನಿಕ್ ಟೋಜ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.