ಶಿವಮೊಗ್ಗ: ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಸಂಸದ ಬಿ.ವೈ. ರಾಘವೇಂದ್ರ, ಗಿಡ ನೆಟ್ಟು ಅದಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಪಕ್ಷ ಕೇವಲ ರಾಜಕೀಯ ಮಾಡುವುದಕ್ಕಷ್ಟೆ ಅಲ್ಲ. ಪ್ರಕೃತಿ ಪರವಾಗಿಯೂ ಇದೆ. ಪ್ರಕೃತಿ ಉಳಿಸಿ ಬೆಳೆಸುವ ಸಲುವಾಗಿ ವೃಕ್ಷಾರೋಹಣ ನಡೆಸಲಾಗುತ್ತಿದೆ. ಇದರಿಂದ ನಮ್ಮ ಕಾರ್ಯಕರ್ತರು ಸಾರ್ವಜನಿಕರಿಗೆ ಪರಿಸರದ ಉಳಿವಿನ ಬಗ್ಗೆ ಅರಿವು ಮೂಡಿಸಬೇಕಿದೆ. ಅಲ್ಲದೆ ವೃಕ್ಷಾರೋಹಣ ಮಾಡುವಾಗ ಮೇಲೆ ವಿದ್ಯುತ್ ತಂತಿ, ಕೆಳಗೆ ಪೈಪ್ ಲೈನ್ ಹೋಗಿರುವುದನ್ನು ನೋಡಿ ಗಿಡ ನೆಡಬೇಕು ಎಂದು ವಿನಂತಿ ಮಾಡಿಕೊಂಡರು.
ಈ ವೇಳೆ ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಹರಿಕೃಷ್ಣ, ತಾಲೂಕು ಯುವಮೋರ್ಚಾ ಅಧ್ಯಕ್ಷ ಶಿವರಾಜ್ ಸೇರಿದಂತೆ ಪುರಸಭೆ ಸದಸ್ಯರು ಹಾಜರಿದ್ದರು.