ಶಿವಮೊಗ್ಗ: ಆರ್.ಟಿ.ಓ ಕಚೇರಿಯಿಂದ ತಾಲೂಕು ಕಚೇರಿಗೆ ಹೊರಟಿದ್ದ ಜೀಪಿನ ಮೇಲೆ ಮರವೊಂದು ಉರುಳಿಬಿದ್ದಿದ್ದು ಜೀಪ್ನಲ್ಲಿದ್ದ ಆರ್‌ಟಿ ಓ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.
ಸಾಗರ ಆರ್.ಟಿ.ಓ ಕಚೇರಿಯಿಂದ ತಾಲೂಕು ಕಚೇರಿಯತ್ತ ಕೆಲಸದ ನಿಮಿತ್ತ ಜೀಪ್ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ. ಮರ ಬೀಳುವ ಸೂಚನೆ ತಿಳಿದು ವೇಗವಾಗಿ ಜೀಪ್ ಚಲಾಯಿಸುವ ಯತ್ನ ಮಾಡುವಷ್ಟಲ್ಲಿ ಮರ ಬಿದ್ದಿದ್ದು ಜೀಪ್ ಜಖಂ ಆಗಿದೆ.
ಪವಾಡ ಸದೃಶ್ಯವೆಂಬಂತೆ ವಾಹನದಲ್ಲಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ಮಹಿಳಾ ಸಿಬ್ಬಂದಿ ಪ್ರಭಾ ಎಂಬುವರು ಆತಂಕಗೊಂಡಿದ್ದಾರೆ. ಘಟನೆಯಿಂದ ಸಾಗರ-ಸಿಗಂದೂರು ರಸ್ತೆ ಬಂದ್ ಆಗಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಮರವನ್ನು ತೆರವುಗೊಳಿಸುತ್ತಿದ್ದಾರೆ.
ಸ್ಥಳಕ್ಕೆ ಎ.ಎಸ್.ಪಿ ಯತೀಶ್, ಪೌರಾಯುಕ್ತ ರಾಜು, ಪರಿಸರ ಅಭಿಯಂತರ ಪ್ರಭಾಕರ್, ನಗರ ಠಾಣೆ ಇನ್ಸ್ಪೆಕ್ಟರ್ ಮಹಾಬಲೇಶ್, ಕಂದಾಯ ಇಲಾಖೆಯ ಆನಂದ್ ನಾಯ್ಕ್, ಗಜೇಂದ್ರ ಇನ್ನಿತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.