ಶಿವಮೊಗ್ಗ: ಮರವೊಂದು ಧರೆಗುರುಳಿ ಜಿಲ್ಲೆಯ ಸಾಗರ - ಸಿಂಗದೂರು ರಸ್ತೆ ಬಂದ್ ಆಗಿದೆ. ಇಲ್ಲಿನ ಅಂಬಾರಗೋಡ್ಲು ಬಳಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ.
ಅಂಬಾರಗೋಡ್ಲು ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದಿದೆ. ಹೀಗಾಗಿ ಈ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಅಲ್ಲದೇ, ಸಿಗಂದೂರು ಪ್ರವಾಸಿಗರಿಗೆ ತೊಂದರೆ ಉಂಟಾಗುವಂತೆ ಆಗಿದೆ. ಸಿಗಂದೂರಿಗೆ ತೆರಳುವವರು ಮತ್ತು ದೇವರ ದರ್ಶನ ಪಡೆದು ಸಾಗರದ ಕಡೆಗೆ ಮರಳುತ್ತಿದ್ದವರು ಮಧ್ಯದಲ್ಲೇ ನಿಲ್ಲಬೇಕಾಗಿದೆ.
ಇದನ್ನೂ ಓದಿ: ರಾಮಸೇನಾದ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ