ಶಿವಮೊಗ್ಗ : 'ತೂತು ಮಡಿಕೆ'ಗೆ ಎಷ್ಟು ನೀರು ಹಾಕಿದರೂ ನಿಲ್ಲುವುದಿಲ್ಲ. ಅದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಬೆಂಗಳೂರಿನ ಲಗ್ಗೆರೆಯ ಸುತ್ತಮುತ್ತ ನಡೆಯುವ ಹಾಸ್ಯಭರಿತ ಘಟನಾವಳಿಗಳನ್ನೇ ಸೇರಿಸಿ ಸಿನಿಮಾ ಮಾಡಲಾಗಿದೆ ಎಂದು ತೂತು ಮಡಿಕೆ ಚಿತ್ರದ ನಿರ್ದೇಶಕ ಚಂದ್ರಕೀರ್ತಿ ತಿಳಿಸಿದರು.
ಶಿವಮೊಗ್ಗ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ತೂತು ಮಡಿಕೆ ಸಿನಿಮಾ ಕೋವಿಡ್ಗೂ ಮೊದಲೇ ಸಿದ್ಧವಾಗಿತ್ತು. ಆದರೆ, ಬಿಡುಗಡೆಯಾಗಿರಲಿಲ್ಲ. ಇದೀಗ ಕೋವಿಡ್ ಕಡಿಮೆ ಆಗಿರುವುದರಿಂದ ಜುಲೈ 8ರಂದು ರಾಜ್ಯಾದ್ಯಂತ ಇದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಹಾಡು ಹಾಗೂ ದೃಶ್ಯಾವಳಿಯ ಕೆಲವು ತುಣುಕುಗಳನ್ನೊಳಗೊಂಡ ಟೀಸರ್ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಕಾಲೇಜುಗಳಲ್ಲಿ ಚಿತ್ರವನ್ನು ಪ್ರಮೋಟ್ ಮಾಡಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುವ ನಂಬಿಕೆ ಇದೆ. ಜನರು ನಮ್ಮ ತಂಡವನ್ನು ಬೆಂಬಲಿಸಬೇಕೆಂದು ಕೋರಿಕೊಂಡರು.
ಇದನ್ನೂ ಓದಿ: ತೆರೆ ಮೇಲೆ ಬರಲಿದೆ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಬಯೋಪಿಕ್
ಚಿತ್ರದಲ್ಲಿ ರಂಗಕಲಾವಿದರ ನಟನೆ ಉತ್ತಮವಾಗಿ ಮೂಡಿಬಂದಿದೆ ಎಂದರು. ಚಂದ್ರಕೀರ್ತಿ ಎಂ., ಪಾವನಗೌಡ, ಪ್ರಮೋದ್ ಶೆಟ್ಟಿ, ಗಿರೀಶ್ ಶಿವಣ್ಣ, ನಂದಗೋಪಾಲ್, ನರೇಶ್ ಭಟ್, ಉಗ್ರಂ ಮಂಜು, ಅರುಣ್ ಮೂರ್ತಿ, ರಾಘವೇಂದ್ರ, ಶಂಕರ್ ಅಶ್ವತ್ಥ್ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ನಟಿ ಪಾವನಾ ಗೌಡ, ನಿರ್ಮಾಪಕರಾದ ಮಧುಸೂದನ್ ರಾವ್, ಶಿವಕುಮಾರ್ ಕೆ.ಬಿ, ನಟರಾದ ಗಿರೀಶ್ ಶಿವಣ್ಣ, ಉಗ್ರಂ ಮಂಜು ಮತ್ತಿತರರು ಇದ್ದರು.