ETV Bharat / state

ನಾಳೆ ಶಿವಮೊಗ್ಗಕ್ಕೆ ರಾಹುಲ್​ ಗಾಂಧಿ ಭೇಟಿ: ಜಿಲ್ಲೆಯ ಕಾಂಗ್ರೆಸ್​ ಅಭ್ಯರ್ಥಿಗಳ ಜೊತೆ ಚರ್ಚೆ - ಈಟಿವಿ ಭಾರತ ಕರ್ನಾಕಟ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಗುರುವಾರ ಶಿವಮೊಗ್ಗ ನಗರಕ್ಕೆ ಆಗಮಿಸಿ ಜಿಲ್ಲೆಯ ಎಲ್ಲ ಕಾಂಗ್ರೆಸ್​ ಅಭ್ಯರ್ಥಿಗಳ ಜೊತೆ 45 ನಿಮಿಷಗಳ ಕಾಲ ಚರ್ಚೆ ನಡೆಸುವ ಬಗ್ಗೆ ಪಕ್ಷದ ಜಿಲ್ಲಾಧ್ಯಕರು ತಿಳಿಸಿದ್ದಾರೆ.

tomorrow-rahul-gandhi-visiting-shimoga
ನಾಳೆ ಶಿವಮೊಗ್ಗಕ್ಕೆ ರಾಹುಲ್​ ಗಾಂಧಿ ಭೇಟಿ: ಜಿಲ್ಲೆಯ ಕಾಂಗ್ರೆಸ್​ ಅಭ್ಯರ್ಥಿಗಳ ಜೊತೆ ಚರ್ಚೆ
author img

By

Published : Apr 26, 2023, 4:58 PM IST

Updated : Apr 26, 2023, 8:33 PM IST

ನಾಳೆ ಶಿವಮೊಗ್ಗಕ್ಕೆ ರಾಹುಲ್​ ಗಾಂಧಿ ಭೇಟಿ: ಜಿಲ್ಲೆಯ ಕಾಂಗ್ರೆಸ್​ ಅಭ್ಯರ್ಥಿಗಳ ಜೊತೆ ಚರ್ಚೆ

ಶಿವಮೊಗ್ಗ: ನಾಳೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಶಿವಮೊಗ್ಗಕ್ಕೆ ಆಗಮಿಸಿ ಜಿಲ್ಲೆಯ ಎಲ್ಲ ಕಾಂಗ್ರೆಸ್​ ಅಭ್ಯರ್ಥಿಗಳ ಜೊತೆ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್​ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಗುರುವಾರ ಬೆಳಗ್ಗೆ 10:30ಕ್ಕೆ ದೆಹಲಿಯಿಂದ ಹೊರಟು 12:40ಕ್ಕೆ ಶಿವಮೊಗ್ಗಕ್ಕೆ ವಿಶೇಷ ವಿಮಾನದಲ್ಲಿ‌ ಆಗಮಿಸಲಿದ್ದಾರೆ ಎಂದರು.

ಈಗಾಗಲೇ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅವರು ಸುಮಾರು 45 ನಿಮಿಷಗಳ ಕಾಲ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಶಿವಮೊಗ್ಗದಿಂದ ಇಬ್ಬರು ಉಡುಪಿ ಜಿಲ್ಲೆಯ ಕಾಪುವಿಗೆ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ದೀಪಕ್​ ಸಿಂಗ್​ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಚುನಾವಣೆ ಬಂದಾಗ ಬೂತ್​ ಮತ್ತು ವಾರ್ಡ್​ ಮಟ್ಟದವರು ಪಕ್ಷ ಬದಲಾಯಿಸುವುದು ಸಹಜ. ಆದರೆ ಇದೇ ಪಕ್ಷದಲ್ಲಿದ್ದು ಕಾರ್ಪೊರೇಟರ್​ ಆಗಿ, ಶಾಸಕರಾಗಿದ್ದ ಕೆ.ಬಿ ಪ್ರಸನ್ನ ಕುಮಾರ್​ ಪಕ್ಷ ಬಿಟ್ಟು ಹೋಗಿದ್ದು ಸೂಕ್ತ ಅಲ್ಲ. ಕೆ.ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್ ಪಕ್ಷ ಬಿಟ್ಟಿರುವುದರಿಂದ ಯಾವುದೇ ಹಾನಿಯಿಲ್ಲ. ಅವರ ಜೊತೆ ಅವರೆ ನೇಮಿಸಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕೆಲ ಮುಸ್ಲಿಂ ಮುಖಂಡರು ಜೆಡಿಎಸ್ ಗೆ ಹೋಗಿದ್ದಾರೆ. ಇದರಿಂದ ನಮಗ ಯಾವುದೇ ಹಿನ್ನಡೆ ಆಗಲ್ಲ ಎಂದರು.

ಇನ್ನು ನಾಗರಾಜ್ ಅವರು ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರ ಅಮಾನತಿಗೆ ಕೆಪಿಸಿಸಿಗೆ ಶಿಫಾರಸು ಪತ್ರ ಕಳಿಸಲಾಗಿದೆ. ಅಲ್ಲದೆ ಅವರಿಗೆ ಬೆಂಬಲ ಸೂಚಿಸಿರುವ ಇತರರ ಅಮಾನತಿಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ರಾಹುಲ್​ ಗಾಂಧಿ ಪ್ರಚಾರ ನಡೆಸಿದ ಕಡೆ ಕಾಂಗ್ರೆಸ್​ ಸೋಲುತ್ತೆ ಎಂಬ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಸುಂದರೇಶ್​ ಅವರು, ಈಶ್ವರಪ್ಪ ಸ್ಥಿತಿ ನೋಡಿದ್ರೆ ವೇಜಾರಾಗಲ್ವ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.

ಇದನ್ನೂ ಓದಿ:ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ.. ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ: ಡಿ.ಕೆ ಶಿವಕುಮಾರ್

ಈ ಬಾರಿ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರ ರಚನೆಯಾಗುತ್ತದೆ - ಆಯನೂರು ಮಂಜುನಾಥ್: ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಇಂದು ನವಲೆ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಜನರ ಪ್ರತಿಕ್ರಿಯೆ ಮತ್ತಷ್ಟು ಧೈರ್ಯ ಹಾಗೂ ಉತ್ಸಾಹವನ್ನು ತುಂಬಿದೆ. ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿ ಕೊನೆಯವರೆಗೂ ಇದೇ ವೇಗವನ್ನು ಉಳಿಸಿಕೊಂಡು ಗೆಲುವಿನ ದಡವನ್ನು ಸೇರುತ್ತೇವೆ ಎಂಬ ಭರವಸೆ ಇದೆ. ನಮ್ಮ ಪಕ್ಷದ ನಾಯಕರು ಸಮಾಜದ ಎಲ್ಲಾ ಸಮುದಾಯಗಳ ಜನರನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಈ ಬಾರಿ ಬದಲಾವಣೆ ಬಯಸುವಂತಹ ವಾತಾವರಣ ಜನರಲ್ಲಿ‌ ಇರುವುದರಿಂದ ನಾವು ನಮ್ಮ ತಂತ್ರಗಾರಿಕೆಯನ್ನು ಹೆಣೆದಿದ್ದೇವೆ. ಆದ್ರೆ ಈ ಬಗ್ಗೆ ಗುಟ್ಟನ್ನು ಕೊಡಲ್ಲ ಎಂದರು.

Last Updated : Apr 26, 2023, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.