ETV Bharat / state

ನಾಳೆ ರಾಜ್ಯಾದ್ಯಂತ KSET-2020 ಪರೀಕ್ಷೆ - ಮೈಸೂರು ವಿಶ್ವವಿದ್ಯಾಲಯ

2020ರ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET-2020) ನಾಳೆ ರಾಜ್ಯಾದ್ಯಂತ ನಡೆಯಲಿದೆ.

Kuvempu University
Kuvempu University
author img

By

Published : Sep 26, 2020, 7:55 PM IST

ಶಿವಮೊಗ್ಗ: ಮೈಸೂರು ವಿಶ್ವವಿದ್ಯಾಲಯವು ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ, ಕೆಸೆಟ್-2020 (KSET-2020)ಯು ನಾಳೆ ರಾಜ್ಯಾದ್ಯಂತ ನಡೆಯಲಿದೆ.

ಕೋವಿಡ್ ಮಾರ್ಗಸೂಚಿ ಅನ್ವಯ ನಾಳೆ ಶಿವಮೊಗ್ಗದಲ್ಲಿಯೂ ಕೆಸೆಟ್-2020 (KSET-2020) ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಾಳೆ ನಡೆಯಲಿದ್ದು, ಶಿವಮೊಗ್ಗ ನಗರದ 11 ಕಾಲೇಜುಗಳಲ್ಲಿ ನಡೆಯಲಿದೆ. ಸದರಿ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಬೆಳಿಗ್ಗೆ 8.30ಕ್ಕೆ ಪ್ರವೇಶ ಪತ್ರ, ಭಾವಚಿತ್ರವುಳ್ಳ ಗುರುತಿನ ಪತ್ರ ಹಾಗೂ ಕೋವಿಡ್-19 ಸಂಬಂಧ ಮುನ್ನೆಚ್ಚರಿಕೆಯೊಂದಿಗೆ ಹಾಜರಾಗತಕ್ಕದ್ದು.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮಾಹಿತಿ ಹಾಗೂ ಇತರೆ ವಿವರಗಳಿಗೆ ಮೈಸೂರು ವಿಶ್ವವಿದ್ಯಾಲಯ ಕೆ-ಸೆಟ್ ವೆಬ್‌ಸೈಟ್ ಅಥವಾ ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಸಂಪರ್ಕಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ಕೆಸೆಟ್ ಸಂಯೋಜನಾಧಿಕಾರಿ‌ ಪ್ರೊ. ರಾಜೇಶ್ವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.