ETV Bharat / state

ಈ ಬಾರಿ ಗೋ ಹತ್ಯೆ ತಡೆ ವಿಧೇಯಕ, ಮುಂದಿನ ಬಾರಿ ಲವ್ ಜಿಹಾದ್ ತಡೆ ಮಸೂದೆ: ಸಿಎಂ ಬಿಎಸ್​ವೈ - CM yadiyurappa on GO hatya prohibition law

ಹಿಂದೆಯೇ ಗೋ ಹತ್ಯೆ ತಡೆ ವಿಧೇಯಕಕ್ಕೆ ಅಧಿವೇಶನದಲ್ಲಿ‌ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿತ್ತು. ಆದರೆ, ಅವರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ನಾಳೆ ಗೋ ಹತ್ಯೆ ತಡೆ ವಿಧೇಯಕ ಮಂಡಿಸಿ, ಜಾರಿ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಸಿಎಂ ಬಿಎಸ್​ವೈ
ಸಿಎಂ ಬಿಎಸ್​ವೈ
author img

By

Published : Dec 7, 2020, 3:43 PM IST

ಶಿವಮೊಗ್ಗ: ಈ ಅಧಿವೇಶನಲ್ಲಿಯೇ ಗೋ ಹತ್ಯೆ ತಡೆ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಾಗರದಲ್ಲಿ ತಿಳಿಸಿದ್ದಾರೆ.

ಸಾಗರದ ನಗರಸಭೆ ವತಿಯಿಂದ ನಡೆದ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ, ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೆಯೇ ಗೋ ಹತ್ಯೆ ತಡೆ ವಿಧೇಯಕಕ್ಕೆ ಅಧಿವೇಶನದಲ್ಲಿ‌ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮತಿಗೆ ಕಳುಹಿಸಲಾಗಿತ್ತು. ಆದರೆ, ಅವರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ನಾಳೆ ಗೋ ಹತ್ಯೆ ತಡೆ ವಿಧೇಯಕ ಮಂಡಿಸಿ, ಜಾರಿ ಮಾಡಲಾಗುವುದು. ಲವ್ ಜಿಹಾದ್ ಕಾನೂನು ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಈ ಅಧಿವೇಶನದಲ್ಲಿ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಸಿಎಂ ಬಿಎಸ್​ವೈ ಹೇಳಿಕೆ

ಇದನ್ನೂ ಓದಿ: ನೂರಕ್ಕೆ ನೂರರಷ್ಟು ಗೋ ಹತ್ಯೆ ತಡೆ ವಿಧೇಯಕ ಜಾರಿಗೆ ತರುತ್ತೇವೆ: ಸಚಿವ ಆರ್.ಅಶೋಕ್

ಭಾರತ ಬಂದ್ ಕೈ ಬಿಡಲು ಸಿಎಂ ಮನವಿ: ಭಾರತ ಬಂದ್ ಕೈ ಬಿಡುವಂತೆ ಈಗಾಗಲೇ ರೈತರಿಗೆ ಪ್ರಧಾನ ಮಂತ್ರಿ ಮನವಿ ಮಾಡಿದ್ದಾರೆ. ಆದರೆ ರೈತರು ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೂಂದರೆ ಆಗುತ್ತದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ರೈತರು ಈ ಕಟು‌ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ. ಭಾರತ ಬಂದ್ ಕೈ ಬಿಡಬೇಕೆಂದು ನಾನು ಸಹ ರೈತರಲ್ಲಿ ಮನವಿ ಮಾಡುತ್ತೇನೆ ಎಂದು ಕೇಳಿಕೊಂಡರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.