ಶಿವಮೊಗ್ಗ : ಕೊರೊನಾ ವೈರಸ್‌ನಿಂದ ಪಾರಾಗಲು ಪ್ರತಿ ಮನೆಗೂ ಆಯುಷ್ ಔಷಧಿ ವಿತರಣೆ ಮಾಡುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಚಿವ ಕೆ ಎಸ್ ಈಶ್ವರಪ್ಪ ಚರ್ಚಿಸಿದರು. ಜಿಲ್ಲೆಯಲ್ಲಿ 60 ವರ್ಷದ ಮೇಲ್ಪಟ್ಟವರಿಗಾಗಿ ಆಯುರ್ವೇದ ಔಷಧಿ ವಿತರಣೆ ಮಾಡುವ ಚಿಂತನೆ ಇದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಮನೆಗೆ ಆಯುರ್ವೇದ ಔಷಧ ಹಂಚುವ ಯೋಚನೆ ಮಾಡಿದೆ. ಯಾವ ರೀತಿ ವಿತರಣೆ ಮಾಡಬೇಕು, ಔಷಧಿಗೆ ಬೆಲೆ ನಿಗದಿ ಸೇರಿದಂತೆ ಔಷಧ ವಿತರಣೆಗೆ ಯಾರನ್ನು ಬಳಸಿಕೊಳ್ಳಬೇಕು ಎಂಬುದು ಸೇರಿ ಇನ್ನಿತರೆ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಅವರು ಚರ್ಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್, ಸಿಇಒ ವೈಶಾಲಿ, ಜಿಲ್ಲಾ ಮಟ್ಟದ ಆಯುಷ್ ಅಧಿಕಾರಿಗಳು ಹಾಜರಿದ್ದರು.