ETV Bharat / state

ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಆಯನೂರು ಮಂಜುನಾಥ್

ಸಿಎಂ ಬದಲಾವಣೆ ಕೇವಲ ಊಹಾಪೋಹವಷ್ಟೆ. ರಾಜ್ಯಕ್ಕೆ ಒಂದು ಸಮರ್ಥ ನಾಯಕತ್ವವಿದ್ದರೆ, ಅದು ಯಡಿಯೂರಪ್ಪನವರದು ಮಾತ್ರ. ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

There is no question of CM change in the state: Ayanur Manjunath
ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಆಯನೂರು ಮಂಜುನಾಥ್
author img

By

Published : Sep 19, 2020, 4:12 PM IST

ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರು ಸಮರ್ಥ ನಾಯಕ. ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಆಯನೂರು ಮಂಜುನಾಥ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಕುರಿತು ಬಹಳ ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಊಹಾಪೋಹವಷ್ಟೆ. ಸಿಎಂ ಬದಲಾವಣೆ ಕೊರೊನಾದಂತಹ ಸಂದಿಗ್ಧ ಕಾಲದಲ್ಲಿಯೂ ಯುವಕರನ್ನು ನಾಚುವಂತಹ ಕೆಲಸ ಮಾಡುತ್ತಿದ್ದಾರೆ. ತಾವೇ ಕೊರೊನಾಗೆ ತುತ್ತಾಗಿದ್ದರೂ ಸಹ ಆಸ್ಪತ್ರೆಯಿಂದಲೇ ಕಾರ್ಯನಿರ್ವಹಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ.

ದೇಶದ ಯಾವ ರಾಜ್ಯದ ಸಿಎಂಗಳು ಸಹ ಮಾಡದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ರಾಜ್ಯಕ್ಕೆ ಒಂದು ಸಮರ್ಥ ನಾಯಕತ್ವವಿದ್ದರೆ, ಅದು ಯಡಿಯೂರಪ್ಪನವರದು ಮಾತ್ರ. ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರು ಮುಂದಿನ ಅವಧಿಯಲ್ಲಿ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.

ಉಮೇಶ್ ಕತ್ತಿಗೆ ಗುಟ್ಕಾ ತಿಂದು ತಲೆ ತಿರುಗಿರಬೇಕು: ಉಮೇಶ್ ಕತ್ತಿ ಸಿಎಂ ವಿರುದ್ದ ಮಾತನಾಡುವ ಚಾಳಿಯನ್ನು ಹೊಂದಿದ್ದಾರೆ. ಅವರು ಗುಟ್ಕಾ ತಿನ್ನುತ್ತಿರುತ್ತಾರೆ. ಇದರಿಂದ ತಲೆ ತಿರುಗಿ ಆಗಾಗ ಸಿಎಂ ವಿರುದ್ದ ಮಾತನಾಡುತ್ತಿರುತ್ತಾರೆ. ಸಿಎಂ ರಾಜ್ಯಕ್ಕೆ ಆಗುವುದು, ಜಿಲ್ಲೆಗೆ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.