ಶಿವಮೊಗ್ಗ: ತೀರ್ಥಹಳ್ಳಿಯ ಚೊಕ್ಕಡಬೈಲಿನ ಶಾರದಮ್ಮ ಎಂಬುವರ ಮನೆಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹರಿ ಗೋವಿಂದ್ ಹಾಗೂ ವಿಕಾಸ್ ಎಂಬ ಯುವಕರು ಮನೆಯವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ನಡೆದಿದೆ.
ಇವರಿಬ್ಬರು ಎರಡು ದಿನಗಳಿಂದ ಮನೆಗೆ ಪೇಂಟ್ ಮಾಡುತ್ತಿದ್ದರು. ಇಂದು ಮನೆಯಲ್ಲಿ ಶಾರದಮ್ಮ ಒಬ್ಬರೇ ಇರುವುದನ್ನು ನೋಡಿ ಹಲ್ಲೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮರನ್ನು ಸ್ಥಳೀಯರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹರಿ ಗೊವಿಂದ್ ಹಾಗೂ ವಿಕಾಸ್ ಎಂಬುವರನ್ನು ಎನ್.ಆರ್.ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಭಾಗದಲ್ಲಿ ಒಂಟಿ ಮನೆಗಳು ಇರುವುದನ್ನು ಗಮನಿಸಿರುವ ಖದೀಮರು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.