ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಟಾಕೀಸ್ ಸಿನಿವಾರ ಕಾರ್ಯಕ್ರಮದಲ್ಲಿ ರೋಡ್ ಟು ಮಂಡಲಾಯ್ ಥಾಯ್ ಭಾಷಾ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2016ರಲ್ಲಿ ತೆರೆಕಂಡು ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಉತ್ತಮ ವಿಮರ್ಶೆ ಗಳಿಸಿರುವ ಹೆಸರಾಂತ ನಿರ್ದೇಶಕ ಮಿಡಿ ಝಿ ನಿರ್ದೇಶನದ ದಿ ರೋಡ್ ಟು ಮಂಡಲಾಯ್ - ಥಾಯ್ ಭಾಷಾ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ವಾರ್ತಾ ಭವನದ ಮಿನಿ ಚಿತ್ರಮಂದಿರಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ಬರ್ಮಾ ದೇಶದ ಲ್ಯಾಶಿಯೋ ನಗರದಿಂದ ಕಾನೂನುಬಾಹಿರವಾಗಿ ಥೈವಾನ್‍ನ ಬ್ಯಾಂಕಾಕ್‍ಗೆ ವಲಸೆ ಬರುವ ಲಿಯಾನ್ ಚಿಂಗ್ ಮತ್ತು ಅ-ಕೌ ಯುವತಿ ಯುವಕನ ಸುತ್ತ ಹೆಣೆದ ಕಥೆಯೇ ದಿ ರೋಡ್ ಟು ಮಂಡಲಾಯ್. ಇಬ್ಬರ ನಡುವಿನ ಉದ್ದೇಶಗಳ ವೈರುಧ್ಯ, ಪ್ರೀತಿ, ವಲಸೆಯ ಸಂಕಷ್ಟಗಳ ಜೊತೆಗೆ ತಮ್ಮವರ ಸುಂದರ ಜೀವನದ ಕನಸೊತ್ತು ಬಂದ ಈ ಯುವ ಮನಸ್ಸುಗಳು ತಮ್ಮ ಉದ್ದೇಶದಿಂದ ಯಶಸ್ಸು ಕಾಣುತ್ತಾರಾ? ಎಂಬುದು ಚಿತ್ರದ ಸಾರಾಂಶ.
ಚಿತ್ರದಲ್ಲಿ ವು-ಕೆ-ಷಿ, ಕೈ-ಕೋ ಮುಂತಾದವರಿದ್ದು, ಚಿತ್ರಕ್ಕೆ ಟಾಮ್ ಫ್ಯಾನ್‍ನ ಛಾಯಾಗ್ರಹಣ, ಲಿಮ್ ಗಿಯೋಗ್ ನ ಸಂಗೀತವಿದೆ. ಚಿತ್ರದ ಒಟ್ಟು ಅವಧಿ 103 ನಿಮಿಷಗಳು. ಚಿತ್ರಕ್ಕೆ ಇಂಗ್ಲಿಷ್ ಸಬ್ ಟೈಟಲ್ ಇರಲಿದೆ.