ಶಿವಮೊಗ್ಗ: ಜಿಲ್ಲಾ ಪೊಲೀಸರು ಪ್ರಸಕ್ತ ವರ್ಷದಲ್ಲಿ ವಿವಿಧ 179 ಪ್ರಕರಣಗಳಲ್ಲಿ 262 ಆರೋಪಿಗಳನ್ನು ಬೇಟೆಯಾಡಿದ್ದಾರೆ. ಬಂಧಿತರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ, ವಾಹನ, ಮಾಬೈಲ್ ಸೇರಿದಂತೆ ಒಟ್ಟು 1,26,84,730 ಮೌಲ್ಯದ ವಸ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ನೀಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ. ಅಶ್ವಿನಿ ಅವರು ಸುದ್ದಿಗೋಷ್ಟಿಯಲ್ಲಿ ಕಳ್ಳತನದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಕುರಿತು ಮಾಹಿತಿ ನೀಡಿದ್ರು. ಪ್ರಸಕ್ತ ವರ್ಷ ಜಿಲ್ಲೆಯ ಶಿವಮೊಗ್ಗ ವಿಭಾಗದಿಂದ 91 ಪ್ರಕರಣಗಳಿಂದ 4,54,1358 ಮೌಲ್ಯದ ವಸ್ತುಗಳು, ಭದ್ರಾವತಿ ವಿಭಾಗದ-24 ಪ್ರಕರಣಗಳಲ್ಲಿ-2,42,6964 ಮೌಲ್ಯದ ಸ್ವತ್ತುಗಳು, ತೀರ್ಥಹಳ್ಳಿ ವಿಭಾಗದಲ್ಲಿ-13 ಪ್ರಕರಣದಲ್ಲಿ 1,52,4400 ಮೌಲ್ಯದ ವಸ್ತುಗಳು, ಶಿಕಾರಿಪುರ ವಿಭಾಗದಲ್ಲಿ -22 ಪ್ರಕರಣದಲ್ಲಿ 2,19,1958 ಮೌಲ್ಯದ ವಸ್ತುಗಳು, ಸಾಗರ ವಿಭಾಗದಲ್ಲಿ 35 ಪ್ರಕರಣಗಳಿಂದ 20 ಲಕ್ಷದ ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು-1 ಕೋಟಿ 26 ಲಕ್ಷದ 84 ಸಾವಿರದ 730 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ಕೆ.ಜಿ. 287 ಗ್ರಾಂ ಚಿನ್ನಾಭರಣ, 5 ಕೆ.ಜಿ. 522 ಗ್ರಾಂ ಬೆಳ್ಳಿ, ಒಂದು ಪಿಕ್ ಅಪ್ ವಾಹನ 4 ಕಾರು ಸೇರಿ ಒಟ್ಟು 22 ವಾಹನಗಳು, 51 ಮೊಬೈಲ್ಗಳು ಸೇರಿವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ವಶಕ್ಕೆ ಪಡೆದ ವಸ್ತುಗಳ ಅವುಗಳ ಮಾಲೀಕರಿಗೆ ಎಸ್ಪಿ ಹಸ್ತಾಂತರಿಸಿದ್ದಾರೆ. ಇದರಲ್ಲಿ ಹೆಚ್ಚಿನವು ಚಿನ್ನಾಭರಣಗಳೇ ಸೇರಿವೆ. ಕಳೆದುಕೊಂಡಿದ್ದ ಚಿನ್ನದ ಮಾಂಗಲ್ಯ ಸರವನ್ನು ಮರಳಿ ಪಡೆದ ಸಂತಸದದಲ್ಲಿ ಮಹಿಳೆಯರ ಕಣ್ಣಾಲೆಗಳಲ್ಲಿ ನೀರು ಬಂತು.