ETV Bharat / state

ನಿವೃತ್ತ ಐಎಫ್ಎಸ್ ಅಧಿಕಾರಿ ಮಗಳು ಐಎಎಸ್​ನಲ್ಲಿ 617 ನೇ ರ‍್ಯಾಂಕ್‌ ಪಡೆದು ಸಾಧನೆ! - ಶಿವಮೊಗ್ಗದ ಸಾಂದೀಪಿನಿ ಶಾಲೆ

ಶಿವಮೊಗ್ಗದ ನಿವೃತ್ತ ಐಎಫ್​ಎಸ್​ ಅಧಿಕಾರಿ ಐ ಎಂ ನಾಗರಾಜ್​ ಅವರ ಮಗಳು ಮೇಘನಾ ಈ ಬಾರಿ ಯುಪಿಎಸ್​ಸಿ 2022- 23ನೇ ಸಾಲಿನಲ್ಲಿ 617ನೇ ರ‍್ಯಾಂಕ್‌ ಪಡೆದಿದ್ದಾರೆ.

ಮೇಘನಾ
ಮೇಘನಾ
author img

By

Published : May 23, 2023, 6:25 PM IST

ಶಿವಮೊಗ್ಗ: ಶಿವಮೊಗ್ಗದ ನಿವೃತ್ತ ಐಎಫ್ಎಸ್ ಅಧಿಕಾರಿ ಐ ಎಂ ನಾಗರಾಜ್ ಅವರ ಮಗಳು ಮೇಘನಾ ಈ ಬಾರಿಯ ಯುಪಿಎಸ್​ಸಿ 2022- 23ನೇ ಸಾಲಿನಲ್ಲಿ 617 ನೇ ರ‍್ಯಾಂಕ್‌ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಿವಮೊಗ್ಗದ ವಿವೇಕಾನಂದ ಬಡಾವಣೆಯ ನಿವಾಸಿ ಐ ಎಂ ನಾಗರಾಜ್ ಅವರು ಶಿವಮೊಗ್ಗದ ವನ್ಯಜೀವಿ ವಿಭಾಗದ ಡಿಎಫ್ಒ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಮಗಳು ಮೇಘನಾ ಅವರು 2022- 23ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಎರಡನೇ ಬಾರಿಯಲ್ಲಿ 617 ನೇ ರ‍್ಯಾಂಕ್‌: ಐ ಎಂ ನಾಗರಾಜ್ ಹಾಗೂ ನಮಿತಾ ಅವರ ಪುತ್ರಿ ಮೇಘನಾ ಅವರು ಶಿವಮೊಗ್ಗದ ಸಾಂದೀಪಿನಿ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿ, ಪೇಸ್​ (PACE) ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಮೇಘನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ವಿಫಲರಾಗಿದ್ದರು. ಈಗ ಎರಡನೇ ಬಾರಿಯಲ್ಲಿ 617 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಮೊದಲು ಬೆಂಗಳೂರಿನ ಪ್ರತಿಷ್ಟಿತ ಇನ್ಸ್ ಸೈಟ್ಸ್ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆದುಕೊಂಡಿದ್ದರು. ಈಗ ಕೋಚಿಂಗ್ ಗೆ ಹೋಗದೇ ನಿತ್ಯ ಗ್ರಂಥಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಸ್ನೇಹಿತೆಯರ ಜೊತೆ ಇದ್ದು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ಈ ಬಾರಿಯ ಪರೀಕ್ಷೆ ಇದೇ ತಿಂಗಳು 28 ರಂದು ನಡೆಯಲಿದ್ದು, ಅದಕ್ಕೆ ತಯಾರಿ ನಡೆಸುತ್ತಿದ್ದಾರೆ.

ರ‍್ಯಾಂಕ್​ಗೆ ಐಪಿಎಸ್ ದೊರೆಯುವ ಸಾಧ್ಯತೆ : ಮಗಳ ಸಾಧನೆಗೆ ತಂದೆ ಐ ಎಂ ನಾಗರಾಜ್ ಸಂತಸ ವ್ಯಕ್ತಪಡಿಸಿದ್ದು, ಮಗಳು ಈ ಮಟ್ಟಿಗೆ ಶ್ರೇಯಸ್ಸು ಪಡೆಯಲು ಆಕೆಯ ಕಠಿಣ ಪರಿಶ್ರಮ ಕಾರಣವಾಗಿದೆ. ಆಕೆಗೆ ಈ ಬಾರಿಯ ರ‍್ಯಾಂಕ್‌ ಐಪಿಎಸ್ ದೊರೆಯುವ ಸಾಧ್ಯತೆ ಇದೆ ಎಂಬ ಅಭಿಲಾಷೆಯನ್ನು ಈ ಟಿವಿ ಭಾರತ್​ಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ.

ಬೆಳಗಾವಿ ಯುವತಿ ಶೃತಿಗೆ 362ನೇ ರ‍್ಯಾಂಕ್‌: ಇನ್ನೊಂದೆಡೆ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಬೆಳಗಾವಿ ಜಿಲ್ಲೆಯ ಯುವತಿ ಶೃತಿ ಯರಗಟ್ಟಿ ಅವರು 362ನೇ ರ‍್ಯಾಂಕ್‌ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿಯಾಗಿರುವ ಶೃತಿ ಯರಗಟ್ಟಿ ಅವರು ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರು. ಶಿರಢಾಣ ಗ್ರಾಮದ ಡಾ ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಶೃತಿ, ಧಾರವಾಡದ ಕೆಸಿಡಿ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿಎಸ್‌ಸಿ ವ್ಯಾಸಂಗ ಮಾಡಿ 7 ಚಿನ್ನದ ಪದಕ ಗಳಿಸಿದ್ದ ಶೃತಿ ಯರಗಟ್ಟಿ, ಈಗ ಆರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಗುರಿ ತಲುಪಿದ್ದಾರೆ.

ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ, ಮಹಾನಂದಾ ದಂಪತಿಯ ಹಿರಿಯ ಪುತ್ರಿ ಆಗಿರುವ ಶೃತಿ ಅವರು ಸದ್ಯ ಬೆಂಗಳೂರಿನ ವಿಜಯನಗರದ ಪಿಜಿಯಲ್ಲಿ ವಾಸವಿದ್ದಾರೆ. ಮಗಳ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: UPSC Results 2023 ಬೆಳಗಾವಿ ಯುವತಿ ಶೃತಿಗೆ 362ನೇ ರ‍್ಯಾಂಕ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.