ETV Bharat / state

ಶಿವಮೊಗ್ಗ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ - ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನ ಪೊಲೀಸರು ಶಿಕಾರಿಪುರದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 400 ಗ್ರಾಂ ಗಾಂಜಾ, 600 ರೂ ನಗದು ವಶಕ್ಕೆ ಪಡೆಯಲಾಗಿದೆ.

The arrest of four men for trying to sell marijuana in Shivamogga
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ
author img

By

Published : Mar 17, 2021, 8:43 AM IST

ಶಿವಮೊಗ್ಗ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನ ಪೊಲೀಸರು ಶಿಕಾರಿಪುರದಲ್ಲಿ ಬಂಧಿಸಿದ್ದಾರೆ.

ಶಿಕಾರಿಪುರದ ಆಶ್ರಯ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುನೀಲ್(26), ಇಮ್ರಾನ್(22) , ದಾದಾಪೀರ್(22) ಹಾಗೂ ರಿಜ್ವಾನ್(23) ರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಶಿಕಾರಿಪುರ ಪಟ್ಟಣದ ನಿವಾಸಿಗಳು ಎನ್ನಲಾಗುತ್ತಿದೆ. ಬಂಧಿತರಿಂದ 400 ಗ್ರಾಂ ಗಾಂಜಾ, 600 ರೂ ನಗದು ವಶಕ್ಕೆ ಪಡೆಯಲಾಗಿದೆ. ಶಿಕಾರಿಪುರದ ಸಿಪಿಐ ಗುರುರಾಜ್ ಮೈಲಾರ್, ಪಿಎಸ್ಐ ರಾಜುರೆಡ್ಡಿ ಅವರ ಜೊತೆ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದು, ಬಂಧಿತರ ವಿರುದ್ದ NDPS ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ.

The arrest of four men for trying to sell marijuana in Shivamogga
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ

ಅಬಕಾರಿ ಪೊಲೀಸರ ದಾಳಿ: 580 ಗ್ರಾಂ ಗಾಂಜಾ ವಶ

ಬೈಕ್ ನಲ್ಲಿ ಸಾಗಿಸುತ್ತಿದ್ದ 580 ಗ್ರಾಂ ಗಾಂಜಾವನ್ನು ಶಿಕಾರಿಪುರ ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ರಜಾಕ್ ಹಾಗೂ ಖಾಲಿದ್ ರನ್ನ ಬಂಧಿಸಲಾಗಿದೆ. ಬಂಧಿತರನ್ನ ಅಬಕಾರಿ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಓದಿ : ಬ್ಯಾಂಕ್ ಖಾತೆಗಳ ಡೇಟಾ ಮಾರಾಟಕ್ಕೆ ಯತ್ನ: 12 ಜನರನ್ನು ವಶಕ್ಕೆ ಪಡೆದ ಸೈಬರ್​ ಕ್ರೈಮ್​​

For All Latest Updates

TAGGED:

marijuana
ETV Bharat Logo

Copyright © 2024 Ushodaya Enterprises Pvt. Ltd., All Rights Reserved.