ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಪರೇಡ್ ನಡೆಸಿ, ಮುಂದೆ ಗಾಂಜಾ ಮಾರಾಟ ಮಾಡದಂತೆ ಎಸ್ಪಿ ಶಾಂತರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಡಿಎಆರ್ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಪರೇಡ್ ನಡೆಸಿದರು. ಕಳೆದ ವಾರ ರೌಡಿಗಳ ಪರೇಡ್ ನಡೆಸಿದ್ದ ಶಾಂತರಾಜು, ಇಂದು ಗಾಂಜಾ ಮಾರಾಟಗಾರರ ಪರೇಡ್ ನಡೆಸಿದ್ದಾರೆ.
ನಿಮ್ಮ ಹಳೆಯ ಕೆಲಸಗಳನ್ನು ಬಿಟ್ಟುಬಿಡಬೇಕು. ಮುಂದೆ ಈ ರೀತಿಯ ಕೃತ್ಯಗಳನ್ನು ಮಾಡಬಾರದು. ನೀವು ಸುಮ್ಮನಿದ್ದು, ಬೇರೆಯವರಿಂದ ಕೃತ್ಯ ನಡೆಸಿದರೆ ಅದು ನಮಗೆ ತಿಳಿಯುತ್ತಿದೆ. ಗಾಂಜಾ ಕೇಸ್ ಅಲ್ಲದೇ ಬೇರೆ ಬೇರೆ ಕೇಸು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಗಾಂಜಾ ಯಾರಿಗೆ ಮಾರಾಟ ಮಾಡುತ್ತೀರಾ ಎನ್ನವ ಬಗ್ಗೆ ನನಗೆ ವೈಯಕ್ತಿಕವಾಗಿ ಮಾಹಿತಿ ನೀಡಿ ಎಂದರು. ಈ ವೇಳೆ, 70 ಜನ ಗಾಂಜಾ ಮಾರಾಟಗಾರರು ಬಂದಿದ್ದರು.