ಶಿವಮೊಗ್ಗ : ಜಿಲ್ಲೆಯಲ್ಲಿ ಎಲ್ಲೆಡೆಯೂ ಸ್ಮಾರ್ಟ್ ಪೋಲ್ಗಳನ್ನು ಅಳವಡಿಸಲಾಗುತ್ತಿದೆ. ಈ ಸ್ಮಾರ್ಟ್ ಪೋಲ್ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯಾಮೆರಾಗಳು ನಗರದಲ್ಲಿ ನಡೆಯುವ ಪ್ರತಿ ಘಟನಾವಳಿಗಳನ್ನೂ ಸೆರೆಹಿಡಿಯಲಿವೆ. ಇದಲ್ಲದೆ ಪ್ರತಿ ವಾಹನದ ಮೂಮೆಂಟ್ ಸಹ ಈ ಕ್ಯಾಮೆರಾದಲ್ಲಿ ಸೆರೆಯಾಗಲಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಮೇಲೆ ಈ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿಯೇ ವಾಹನಗಳ ನಂಬರ್ ಪ್ಲೇಟ್ಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತಹ ಕ್ಯಾಮೆರಾಗಳನ್ನೂ ಸ್ಮಾರ್ಟ್ ಪೋಲ್ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ.
ಸ್ಮಾರ್ಟ್ ಪೋಲ್ಗಳಲ್ಲಿ ಅಳವಡಿಸುವ ಕ್ಯಾಮೆರಾಗಳ ಮೂಲಕ ಕೇವಲ ವಾಹನಗಳನ್ನು ಮಾತ್ರ ಟ್ರ್ಯಾಕ್ ಮಾಡಲ್ಲ, ನಗರ ಸಾರಿಗೆ ಬಸ್ಗಳನ್ನೂ ಟ್ರ್ಯಾಕ್ ಮಾಡಲಾಗುತ್ತದೆ. ಬಸ್ಗಳು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬರುತ್ತವೆ ಎಂಬುದನ್ನೂ ಟ್ರ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚಾರ ನಡೆಸಬೇಕಾಗುತ್ತದೆ.
ಇದಲ್ಲದೆ ಶಿವಮೊಗ್ಗ ನಗರದಲ್ಲಿನ ಕಸ ಸಂಗ್ರಹಣೆ ಬಗ್ಗೆಯೂ ಈ ಕ್ಯಾಮೆರಾಗಳು ಕಣ್ಗಾವಳು ವಹಿಸಲಿವೆ. ಕಸ ಸಂಗ್ರಹಣೆಯ ಪ್ರತಿ ವಾಹನಕ್ಕೂ ಜಿಪಿಎಸ್ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಪ್ರತಿ ಮನೆಯಿಂದಲೂ ಪ್ರತಿದಿನ ಕಸ ಸಂಗ್ರಹಣೆ ಮಾಡಿ ನಿರ್ಮಲ ಶಿವಮೊಗ್ಗ ಮಾಡಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.