ಶಿವಮೊಗ್ಗ: ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿ, ಅವರಿಂದ 1 ಕೆಜಿ ಗಾಂಜಾವನ್ನು ತುಂಗಾ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಸಿಪಿಐ ದೀಪಕ್ ದಾಳಿ ನಡೆಸಿದ್ದಾರೆ.
ಈ ವೇಳೆ 1) ಅಬ್ದುಲ್ ಮುನಾಫ್( 22), 2) ಅಸಾದಿ @ ಅಸಾದುಲ್ಲಾ ಖಾನ್(22), 3)ಮಹಮದ್ ಅನಾಸ್( 18), 4)ಸಯ್ಯದ್ ಇಬ್ರತ್ ಖಾನ್( 19), 5) ಸಾದತ್ ಇಮ್ತಿಯಾಜ್ (23) ಮತ್ತು 6) ಗುಲಾಮ್ ನಾಜ್(34) ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇವರಿಂದ 1 ಕೆಜಿ ಗಾಂಜಾ, 3 ತಲ್ವಾರ್ ಹಾಗೂ 2,585 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಾಗಿದೆ.