ETV Bharat / state

ಪರ್ಯಾಯ ಭೂಮಿ ನೀಡದಿದ್ದರೆ ವಿಷ ಪ್ರಾಶನ ಮಾಡುತ್ತೇವೆ: ವೃದ್ಧ ದಂಪತಿ ಎಚ್ಚರಿಕೆ - protest by old couple in front of Shimoga DC office

ನಮಗೆ ಕೂಡಲೇ ಪರ್ಯಾಯ ಭೂಮಿ ನೀಡಬೇಕು. ಇಲ್ಲದೆ ಹೋದರೆ ಇಡೀ ಕುಟುಂಬ ಜಿಲ್ಲಾಧಿಕಾರಿ ಕಚೇರಿಯೆದುರು ವಿಷ ಪ್ರಾಶನ ಮಾಡಿ ಸಾಯುತ್ತೇವೆ ಎಂದು ಸಂತ್ರಸ್ತ ವೃದ್ಧ ದಂಪತಿ ಎಚ್ಚರಿಸಿದ್ದಾರೆ.

old-couple
ವೃದ್ಧ ದಂಪತಿಗಳು
author img

By

Published : Mar 8, 2021, 5:28 PM IST

ಶಿವಮೊಗ್ಗ: ಪರ್ಯಾಯವಾಗಿ ನೀಡಿದಂತಹ ಜಮೀನನ್ನು ನಮ್ಮ ಸ್ವಾಧೀನಕ್ಕೆ ಕೊಡುವವರೆಗೂ ಧರಣಿ ಸತ್ಯಾಗ್ರಹ ಹೋರಾಟ ಕೈ ಬಿಡುವುದಿಲ್ಲ ಎಂದು ಶರಾವತಿ ಸಂತ್ರಸ್ತ ವೃದ್ಧ ದಂಪತಿ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.

ವೃದ್ಧ ದಂಪತಿಗಳ ಮೌನ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಗ್ರಾಮದ ಸೀತಾರಾಮ್ ಎಂಬುವವರ ಕುಟುಂಬ ಪ್ರತಿಭಟನೆ ನಡೆಸುತ್ತಿದ್ದು, ಶರಾವತಿ ಸಂತ್ರಸ್ತರಾದ ನಮಗೆ ಮುಳುಗಡೆ ಜಮೀನಿನ ಪರ್ಯಾಯವಾಗಿ ಸರ್ಕಾರ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ 9ಎ ರಲ್ಲಿ 3 ಎಕರೆ ರೆವಿನ್ಯೂ ಭೂಮಿ ಸಾಗುವಳಿ ಚೀಟಿ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಜಮೀನಲ್ಲಿ ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆಯವರು ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ. ಇದಕ್ಕಾಗಿ ಕಚೇರಿಗಳಿಗೆ ಅಲೆದೆಲೆದು ಸಾಕಾಗಿದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: ಬಜೆಟ್ ಸಂಪೂರ್ಣ ನಿರಾಶಾದಾಯಕ; ಎಸ್​.ಆರ್​. ಪಾಟೀಲ

ನಮಗೆ ಕೂಡಲೇ ಪರ್ಯಾಯ ಭೂಮಿ ನೀಡಬೇಕು. ಇಲ್ಲದಿದ್ದಲ್ಲಿ ಇಡೀ ಕುಟುಂಬ ಜಿಲ್ಲಾಧಿಕಾರಿ ಕಚೇರಿಯೆದುರು ವಿಷ ಪ್ರಾಶನ ಮಾಡಿ ಸಾಯುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ನಮಗೆ ಕೊಡಬೇಕಾದ ಪರ್ಯಾಯ ಭೂಮಿಯನ್ನು ನಮ್ಮ ಸ್ವಾಧೀನಕ್ಕೆ ನೀಡುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.