ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 268 ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,576 ಕ್ಕೆ ಏರಿಕೆಯಾಗಿದೆ.
ಇಂದು 147 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 5,225 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 7 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೂ ಜಿಲ್ಲೆಯಲ್ಲಿ 134 ಜನ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1726 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 209, ಕೋವಿಡ್ ಕೇರ್ ಸೆಂಟರ್ ನಲ್ಲಿ 254, ಖಾಸಗಿ ಆಸ್ಪತ್ರೆಯಲ್ಲಿ 237 ಜನ ಇದ್ದಾರೆ. ಮನೆಯಲ್ಲಿ 830 ಜನ ಐಸೋಲೇಷನ್ ನಲ್ಲಿದ್ದಾರೆ. ಆರ್ಯವೇದಿಕ್ ಕಾಲೇಜಿನಲ್ಲಿ 988 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುವಾರು ಸೋಂಕಿತರ ವಿವರ.
ಶಿವಮೊಗ್ಗ-132
ಭದ್ರಾವತಿ-31
ಶಿಕಾರಿಪುರ-38
ತೀರ್ಥಹಳ್ಳಿ-06
ಸೊರಬ-12
ಸಾಗರ-14
ಬೇರೆ ಜಿಲ್ಲೆಯಿಂದ 05 ಜನ ಸೊಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 1,486 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,279 ಜನರ ವರದಿ ಬಂದಿದೆ.