ಶಿವಮೊಗ್ಗ : ನಗರದ ಡಿಎಆರ್ ಮೈದಾನದಲ್ಲಿ ನಗರದ ಉಪ ವಿಭಾಗ ವತಿಯಿಂದ ರೌಡಿ ಪೆರೇಡ್ ನಡೆಸಲಾಯಿತು. ಪೆರೇಡ್ನಲ್ಲಿ ರೌಡಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್, ಯಾವುದೇ ಅಪರಾಧ ಪ್ರಕರಣಗಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಹಾಗೆಯೆ ಅನೇಕ ವರ್ಷಗಳಿಂದ ಯಾವುದೇ ಅಪರಾಧಗಳಲ್ಲಿ ಭಾಗಿಯಾಗದೇ ಪರಿವರ್ತಿತರಾಗಿದ್ದರೆ ಕಾನೂನು ಪ್ರಕಾರ ಮುಕ್ತರಾಗಬಹುದು ಹಾಗಾಗಿ ಸನ್ನಡತೆಯಿಂದ ಬದುಕಿ. ಯಾರು ಸಹ ಬಯಸಿ ಅಪರಾಧಿಗಳಾಗುವುದಿಲ್ಲ ಪರಿಸ್ಥಿತಿಯ ಕೈಗೊಂಬೆಗಳಾಗಿ ಅಪರಾಧಿಗಳಾಗುತ್ತಾರೆ ಹಾಗಾಗಿ ಬದಲಾಗಿ ಎಂದು ರೌಡಿಗಳಿಗೆ ಬುದ್ದಿ ಮಾತು ಹೇಳಿದರು.