ಶಿವಮೊಗ್ಗ : ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಛಾವಣಿ ಹಾಳಾಗಿ ಮೂರು ವರ್ಷಗಳಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮಳೆ ಬಂದರೆ ಕಡತ ಮತ್ತು ಕಂಪ್ಯೂಟರ್ಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಡುತ್ತಾರೆ.
ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ಈ ಕಚೇರಿ ಇದೆ. ಕಚೇರಿಯ ಕಟ್ಟಡ ಬ್ರೀಟಷ ಕಾಲದಲ್ಲಿ ಅಂದರೆ 1855 ರಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡ ಇಂದಿಗೂ ಗಟ್ಟಿ ಮುಟ್ಟಾಗಿದೆ. ಆದರೆ, ಛಾವಣಿ ಮಾತ್ರ ಹಾಳಾಗಿ ಹೋಗಿದೆ. ಮೇಲ್ಛಾವಣಿ ಹಾಳಾಗಿರುವ ಕಾರಣ ಮಳೆ ಬಂದಾಗ ಕಚೇರಿಯ ಒಳಗೇ ನೀರು ಬರಲು ಪ್ರಾರಂಭಿಸುತ್ತದೆ.
ಈಗಾಗಲೇ ಕಟ್ಟಡದ ಛಾವಣಿ ದುರಸ್ತಿಗಾಗಿ ತಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪ್ರತಿ ಮಳೆಗಾಲದಲ್ಲೂ ನಮಗೆ ಇದೇ ಸ್ಥಿತಿ. ತಮ್ಮ ಮೇಲಧಿಕಾರಿಗಳು ಕಾಮಗಾರಿ ನಡೆಸಲು ಹಣ ಮಂಜೂರು ಮಾಡಿದ ತಕ್ಷಣ ಮೇಲ್ಛಾವಣಿ ದುರಸ್ತಿ ಪಡಿಸಲಾಗುವುದು ಎಂದು ಇಲ್ಲಿನ ಎಇಇ ಹಾಗೂ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಎಥನಾಲ್ ನೀತಿ ರೂಪಿಸುತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ