ETV Bharat / state

ಪ್ರಧಾನಿ ಬಳಿ ಮಾತನಾಡೋಕೆ ಬಿಜೆಪಿ ಸಂಸದರಿಗೆ ಭಯ: ಹೆಚ್. ಎಸ್. ಸುಂದರೇಶ್

ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದರೂ ಸಹ ಪರಿಹಾರದ ಬಗ್ಗೆ ಪ್ರಧಾನಿ ಬಳಿ ಯಾರೂ ಬಾಯ್ಬಿಡುತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸುಂದರೇಶ್​ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್
author img

By

Published : Sep 24, 2019, 8:10 AM IST

ಶಿವಮೊಗ್ಗ: ಅನರ್ಹ ಶಾಸಕರ ಪರ ನಿಂತಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಜ್ಯದ ನೆರೆ, ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯ ಪ್ರವಾಹದಿಂದ ಮೂರು ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಲಕ್ಷಕ್ಕೂ ಹೆಚ್ಚು ಹೆಕ್ಟೇರ್​ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ. ಸಾವಿರಾರು ಶಾಲೆಗಳು ಬಿದ್ದುಹೋಗಿವೆ. ಸಾವಿರಾರು ಕಿ. ಮೀ ರಸ್ತೆಗಳು ಹಾಳಾಗಿವೆ. ಇಷ್ಟೆಲ್ಲ ಸಮಸ್ಯೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲವೆಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್

ರಾಜ್ಯದಲ್ಲಿ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿದ್ದರೂ ಸಹ ಪ್ರವಾಹ ಪರಿಹಾರದ ಬಗ್ಗೆ ಪ್ರಧಾನಿ ಮೊದಿ ಅವರ ಬಳಿ ಮಾತನಾಡಲು ಎಲ್ಲರೂ ಭಯಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನು ದೇಶದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕುಸಿಯುತ್ತಿದೆ. ಬಿಜೆಪಿಗೆ ಮತ ನೀಡಿದ ಯುವಕರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ ಎಂದು ಸುಂದರೇಶ್ ಹೇಳಿದ್ರು​.

Intro:ಶಿವಮೊಗ್ಗ,
ಅನರ್ಹ ಶಾಸಕರ ಪರ ಬ್ಯಾಟಿಂಗ್ ಬಿಸಲು ಸಮಯ ವ್ಯರ್ಥ ಮಾಡುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ರಾಜ್ಯದ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ನೆರೆಯ ಪ್ರವಾಹದಿಂದ ಮೂರು ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಲಕ್ಷಕ್ಕೂ ಹೆಚ್ಚು ಹೆಟ್ಟರ ಭೂಮಿಯಲ್ಲಿ ಬೆಳೆಹಾನಿಯಾಗಿದೆ .
ಸಾವಿರಾರು ಶಾಲೆಗಳು ಬಿದ್ದುಹೋಗಿವೆ.ಸಾವಿರಾರು ಕೀ ಲೋ ಮೀಟರ್ ರಸ್ತೆ ಗಳು ಹಾಳಾಗಿದೆ. ಇದರಿಂದ ಸಂತ್ರಸ್ತರು ಸಂಕಟದಿಂದ ಇನ್ನೂ ಹೊರಬಂದಿಲ್ಲ.‌
ಇಷ್ಟೇಲ್ಲಾ ಸಮಸ್ಯೆ ಯಾಗಿದ್ದರು ಸಹ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದರು ಸಹ ಪರಿಹಾರದ ಬಗ್ಗೆ ಪ್ರಧಾನಿಗಳ ಹತ್ತಿರ ಯಾರೂ ಮಾತನಾಡುತ್ತಿಲ್ಲ ಎಲ್ಲರೂ ಭಯಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭಾರತದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕುಸಿಯುತ್ತಿದೆ. ಬಿಜೆಪಿಗೆ ಮತ ನೀಡಿದ ಯುವಕರು ಕಂಗಾಲಾಗುತ್ತಿದ್ದಾರೆ.
ಉದ್ಯೋಗ ಮಾಯವಾಗುತ್ತಿದೆ ಎಂದರು.
ಪ್ರಧಾನಿ ಮೋದಿಯವರು ನೆರೆ ಪರಿಹಾರದ ಪ್ರದೇಶಗಳಿಗೆ ಭೇಟಿ ನೀಡದೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಅಮೆರಿಕದಲ್ಲಿ 1.45 ಲಕ್ಷ ಕೋಟಿ ಖರ್ಚು ಮಾಡಿ ಸಭೆ ನಡೆಸುತ್ತಿದ್ದಾರೆ .ಇದು ಕೂಡ ಅಮೆರಿಕ ಅಧ್ಯಕ್ಷ ಚುನಾವಣೆಗೆ ಅನುಕೂಲವಾಗಲೆಂದು ಹೊರತು ಬೇರೆ ಏನೂ ಇಲ್ಲ ಎಂದರು.
ಇಲ್ಲಿ ‌ನೇರೆ ಸಂತ್ರಸ್ತರು ಬಿದಿಯಲ್ಲಿದ್ದಾರೆ ಅಲ್ಲಿ ಮೋದಿ ವಿಜೃಂಭಣೆಯಿಂದ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದಾರೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.