ETV Bharat / state

ಹೃದಯಾಘಾತದಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಸಾವು - ಮೆಗ್ಗಾನ್​ ಆಸ್ಪತ್ರೆ

ಕೊಲೆ ಪ್ರಕರಣದಲ್ಲಿ ಮಂಗಳೂರು ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿ ಹೃದಯಾಘಾತದಿಂದ ನಿನ್ನೆ ಸಾವನ್ನಪ್ಪಿದ್ದಾನೆ.

Shimoga Central jail
ಶಿವಮೊಗ್ಗ ಕೇಂದ್ರ ಕಾರಾಗೃಹ
author img

By

Published : Oct 23, 2020, 3:30 PM IST

Updated : Oct 23, 2020, 3:48 PM IST

ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದ ಸಜಾ ಕೈದಿವೋರ್ವ ಸಾವನ್ನಪ್ಪಿದ್ದಾರೆ. ನಗರ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಬಂಧಿಯಾಗಿದ್ದ ಲೋಕೇಶ್ ಬಂಗೇರ (53) ಹೃದಯಾಘಾತದಿಂದ ಸಾವನ್ನಪ್ಪಿದ ಕೈದಿ.

ಗುರುವಾರ ಮಧ್ಯಾಹ್ನ ಎದೆ ನೋವು ಎಂದು ಹೇಳಿ ಜೈಲಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್​ಗೆ ತೆರಳಲು, ರೂಂನಲ್ಲಿ ಇರುವ ಮಾಸ್ಕ್ ತೆಗೆದುಕೊಂಡು ಬರುವುದಾಗಿ ಹೋಗಿದ್ದಾರೆ. ಮಾಸ್ಕ್ ತೆಗೆದುಕೊಂಡು ಬರುವಾಗ ಜೈಲಿನ ಆವರಣದಲ್ಲಿಯೇ ಹಠಾತ್ ಆಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಲೋಕೇಶ್​ರನ್ನು ಮೆಗ್ಗಾನ್ ಅಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಡಾ.ರಂಗನಾಥ್.ಪಿ

ಲೋಕೇಶ್ ಮೂಲತಃ ಸಕಲೇಶಪುರದ ನಿವಾಸಿಯಾಗಿದ್ದಾರೆ. 2019ರ ಡಿಸೆಂಬರ್​ನಲ್ಲಿ ಕೊಲೆ ಪ್ರಕರಣದಲ್ಲಿ ಮಂಗಳೂರು ಕೋರ್ಟ್ ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದರು. ಇವರ ಮರಣೋತ್ತರ ಪರೀಕ್ಷೆಯ ನಂತರ ಇವರ ದೇಹವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಕೇಂದ್ರ ಕಾರಾಗೃಹದ‌ ಮುಖ್ಯ ಅಧೀಕ್ಷಕ ಡಾ.ರಂಗನಾಥ್. ಪಿ ಮಾಹಿತಿ ನೀಡಿದ್ದಾರೆ.

Last Updated : Oct 23, 2020, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.