ETV Bharat / state

ರೈಲ್ವೆ ಬೋಗಿಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು

ಅಸ್ಸೋಂನಿಂದ ಬೆಂಗಳೂರಿಗೆ ಬಂದಿದ್ದ ಹೆಂಡತಿ ಮತ್ತು ಮಕ್ಕಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಬರುಲು ತೆರಳಿದ್ದ ಬ್ಯಾಂಕ್​ ಮ್ಯಾನೇಜರ್​​ ರೈಲ್ವೆ ಬೋಗಿಯ ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

shimoga-bank-manager-dies-of-heart-attack-in-railway-carriage
ಶಿವಮೊಗ್ಗ: ರೈಲ್ವೆ ಬೋಗಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಹೃದಯಾಘಾತದಿಂದ ಸಾವು
author img

By

Published : Mar 26, 2023, 7:00 PM IST

ಶಿವಮೊಗ್ಗ: ಬೆಂಗಳೂರಿನಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ರೈಲ್ವೆ ಬೋಗಿಯಲ್ಲಿ ಶೌಚಾಲಯದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ದುರ್ದೈವಿ ಅಶೋಕ್ ಚೌಧರಿ ಅವರು ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಅಸ್ಸೋಂ ಮೂಲದವರಾಗಿದ್ದ ಅಶೋಕ್ ಚೌಧರಿ ಅವರು ಅಸ್ಸೋಂ ನಿಂದ ಬೆಂಗಳೂರಿಗೆ ಬಂದಿದ್ದ ತಮ್ಮ ಹೆಂಡತಿ ಹಾಗೂ ಮಕ್ಕಳನ್ನು ಕರೆ ತರಲು ನಿನ್ನೆ ಬೆಳಗ್ಗೆ ಶಿವಮೊಗ್ಗ-ಯಶವಂತಪುರದ ಇಂಟರಸಿಟಿ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ‌. ರೈಲಿನಲ್ಲಿಯೇ ಶೌಚಾಲಯಕ್ಕೆ ತೆರಳಿದ ಅಶೋಕ್ aವರು ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದಿದ್ದಾರೆ.

ಇಂಟರಸಿಟಿ ರೈಲು ಇಂದು ಬೆಳಗ್ಗೆ ಯಶವಂತಪುರವನ್ನು ಬಿಟ್ಟು ಮಧ್ಯಾಹ್ನ ಶಿವಮೊಗ್ಗ ತಲುಪಿದ್ದು. ಈ ವೇಳೆ ರೈಲು ಸ್ವಚ್ಛಗೊಳಿಸುವ ಸಿಬ್ಬಂದಿ ಸ್ವಚ್ಛತೆ ಮಾಡಲು ಹೋದಾಗ ಎಸಿ ರೂಮ್​ನ ಶೌಚಾಲಯವು ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಅಶೋಕ್ ಚೌಧರಿ ಮೃತಪಟ್ಟಿದ್ದರು. ಮೃತದೇಹವನ್ನು ರೈಲ್ವೆ ಪೊಲೀಸರು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

ಅಶೋಕ ಚೌಧರಿ ಪತ್ನಿಯಿಂದ ರೈಲ್ವೆ ಸಚಿವರಿಗೆ ದೂರು: ಮೃತ ಅಶೋಕ್​ ಚೌಧರಿ ಅವರ ಪತ್ನಿ'ಅಶೋಕ್ ನಿನ್ನೆ ನಿಗದಿತ ರೈಲಿನಲ್ಲಿ ಬೆಂಗಳೂರು ತಲುಪದೆ ಹೋದಾಗ ಅಶೋಕ್ ಚೌಧರಿ ಕಾಣೆಯಾಗಿದ್ದಾರೆ ಎಂದು ರೈಲ್ವೆ ಸಚಿವರಿಗೆ ದೂರು ನೀಡಿದ್ದರು. ಇದರಿಂದ ರೈಲ್ವೆ ಸಚಿವರು ಅಶೋಕ್​ ಚೌಧರಿ ಬಗ್ಗೆ ಪರಿಶೀಲಿಸುವಂತೆ ರೈಲ್ವೆ ಪೊಲೀಸರಿಗೆ ಸೂಚನೆ‌ ನೀಡಿದ್ದರು. ಚೌಧರಿ ಅವರಿಗೆ ಸಣ್ಣದಾಗಿ ಹೃದಯಾಘಾತವಾಗಿತ್ತು. ಅದರಲ್ಲೂ ಸಹ ಕುಟುಂಬದವರನ್ನು ಕರೆತರಲು ಹೋಗಿದ್ದರು ಎಂದು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತ: ಮಾರ್ಚ್​ 8 ರಂದು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕುಳಿತ ಸೀಟ್​ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದ ಮಂತ್ರಿ ಮಾಲ್​ ಬಳಿ ನಡೆದಿತ್ತು. ಸುಮಾರು 61 ವರ್ಷದ ಅಬ್ದುಲ್ ಖಾದಿರ್ ಅವರು ಕೇರಳದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಹತ್ತಿರದ ಬಸ್ ಸ್ಟಾಪ್​ನಲ್ಲಿ ಬಸ್ ಹತ್ತಿ ಮೆಜೆಸ್ಟಿಕ್‌ ಕಡೆಗೆ ಪ್ರಯಾಣಿಸುತ್ತಿದ್ದರು. ಸುಮಾರು 10 ಗಂಟೆಯ ಸಮಯದಲ್ಲಿ ಬಸ್ ಮಂತ್ರಿ ಮಾಲ್ ಬಳಿ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಳಿತಿದ್ದ ಸೀಟ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಪ್ರಯಾಣಿಕರು ಅವರನ್ನು ನೋಡಿ ಕಂಡಕ್ಟರ್​ಗೆ ಮಾಹಿತಿ ನೀಡಿದರು.

ಬಳಿಕ ಕಂಡಕ್ಟರ್​ ಮತ್ತು ಬಸ್​ ಚಾಲಕ ಆ ವ್ಯಕ್ತಿಯನ್ನು ಕೆಳಗೆ ಮಲಗಿಸಿ ಉಸಿರಾಟ ಪರಿಶೀಲಿಸಿದ್ದಾರೆ. ಆದ್ರೆ ಅವರ ದೇಹದಲ್ಲಿ ಯಾವುದೇ ಚಲನವಲನಗಳು ಕಾಣದ ಹಿನ್ನೆಲೆ ಈ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಮಾತನಾಡಿ, ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಬಸ್​ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮಾಜಿ ಶಾಸಕ ವೆಂಕಟಸ್ವಾಮಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.