ETV Bharat / state

ಗಾಯಾಳುವನ್ನು ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ದು ಶಿವಮೊಗ್ಗ ಎಎಸ್​ಪಿ.. ವಿಧಿಯಾಟಕ್ಕೆ ವ್ಯಕ್ತಿ ಬಲಿ - ಶಿವಮೊಗ್ಗ ಎಎಸ್​ಪಿ

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಶಿವಮೊಗ್ಗ ಹೆಚ್ಚುವರಿ ಎಎಸ್​ಪಿ ವಿಕ್ರಂ ಆಮ್ಟೆ ಮಾನವೀಯತೆ ಮೆರೆದಿದ್ದಾರೆ.

vikram amte
Etv Bharatಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಎಎಸ್​ಪಿ ವಿಕ್ರಂ ಆಮ್ಟೆ
author img

By

Published : Oct 16, 2022, 1:11 PM IST

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಓರ್ವರನ್ನು ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್​ಪಿ) ವಿಕ್ರಂ ಆಮ್ಟೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ ನಗರದ ಹೊರವಲಯದ ಹರಿಗೆ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಇರ್ಫಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್​ಗಾಗಿ ಕಾಯುತ್ತಿದ್ದರು.

ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಎಎಸ್​ಪಿ ವಿಕ್ರಂ ಆಮ್ಟೆ

ಇದನ್ನೂ ಓದಿ: ಹಾಸನ ಬಳಿ ಭೀಕರ ಅಪಘಾತಕ್ಕೆ 9 ಮಂದಿ ಸಾವು: 5-6 ಕಿಮೀ ಸಾಗಿದ್ರೆ ಮನೆ ಸೇರ್ತಿದ್ದ ಕುಟುಂಬದ ಮೇಲೆ ಜವರಾಯನ ಅಟ್ಟಹಾಸ

ಕಾರ್ಯ ನಿಮಿತ್ತ ಭದ್ರಾವತಿಗೆ ತೆರಳಿ ಅದೇ ಮಾರ್ಗವಾಗಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದ ಹೆಚ್ಚುವರಿ ಎಎಸ್​ಪಿ ವಿಕ್ರಂ ಆಮ್ಟೆ ಅವರು ಅಪಘಾತ ಗಮನಿಸಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಸಾರ್ವಜನಿಕರ ನೆರವಿನೊಂದಿಗೆ ತಮ್ಮ ಕಾರಿನಲ್ಲಿಯೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಅಸುನೀಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.