ETV Bharat / state

ನಿರ್ಗತಿಕರಿಗೆ ಆಹಾರ, ಕರ್ತವ್ಯನಿರತ ಪೊಲೀಸರಿಗೆ ಜ್ಯೂಸ್ ವಿತರಿಸಿದ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ - ನಿರ್ಗತಿಕರಿಗೆ ಆಹಾರ ನೀಡಿದ ಯುವ ಕಾಂಗ್ರೆಸ್

ವೀಕೆಂಡ್​ ಲಾಕ್​ಡೌನ್ ಕರ್ಫ್ಯೂ ಹಿನ್ನೆಲೆ ಹೋಟೆಲ್​ಗಳು ಬಂದ್​ ಆದ ಕಾರಣ ಆಹಾರ ಸಿಗದ ಜನರಿಗೆ ಶಿವಮೊಗ್ಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಜೊತೆಗೆ ಪೊಲೀಸರಿಗೂ ಕೂಡ ಜ್ಯೂಸ್​ ನೀಡುತ್ತಿದೆ.

shimogha
shimogha
author img

By

Published : Apr 25, 2021, 4:45 PM IST

Updated : Apr 25, 2021, 4:59 PM IST

ಶಿವಮೊಗ್ಗ: ವೀಕೆಂಡ್​ ಲಾಕ್​ಡೌನ್ ಕರ್ಫ್ಯೂ ಹಿನ್ನೆಲೆ ಬಹುತೇಕ ಹೋಟೆಲ್​ಗಳು ಬಂದ್ ಆಗಿವೆ. ಇದರಿಂದ ನಿರ್ಗತಿಕರಿಗೆ ಊಟವಿಲ್ಲದೆ ಪರದಾಡುವಂತಾಗಿದೆ. ಇದನ್ನು ಮನಗಂಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಿರ್ಗತಿಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಿರ್ಗತಿಕರಿಗೆ ಆಹಾರ, ಕರ್ತವ್ಯನಿರತ ಪೊಲೀಸರಿಗೆ ಜ್ಯೂಸ್ ವಿತರಿಸಿದ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ನಿರ್ಗತಿಕರಿಗೆ ಆಹಾರದ ಪೂಟ್ಟಣಗಳನ್ನು ನೀಡಿದೆ. ಜೊತೆಗೆ ನೀರಿನ ಬಾಟಲಿಗಳನ್ನು ನೀಡಿ ಸಹಾಯ ಮಾಡುತ್ತಿದೆ. ದಿನದ ಎರಡು ಹೊತ್ತು ಆಹಾರದ ಪೊಟ್ಟಣವನ್ನು ವಿತರಿಸುತ್ತಿದೆ. ಈ ನಿರ್ಗತಿಕರು ಬೇರೆ ರಾಜ್ಯದಿಂದ ಬಂದವರಾಗಿದ್ದಾರೆ. ಇವರಲ್ಲಿ ಪ್ರತಿನಿತ್ಯ ದುಡಿದು ತಿನ್ನುವವರೇ ಹೆಚ್ಚು. ಇಂತಹವರಿಗೆ ಪ್ರತಿನಿತ್ಯ ಆಹಾರವನ್ನು ನೀಡುವಂತಹ ಪುಣ್ಯದ ಕೆಲಸವನ್ನು ಈ ಯುವ ಕಾಂಗ್ರೆಸ್​ ಮಾಡುತ್ತಿದೆ.

ವೀಕೆಂಡ್ ಕರ್ಫ್ಯೂ ಕರ್ತವ್ಯದಲ್ಲಿರುವ ಪೊಲೀಸರಿಗೆ ಯುವ ಕಾಂಗ್ರೆಸ್​ನ ಕಾರ್ಯಕರ್ತರು ಜ್ಯೂಸ್ ವಿತರಿಸಿದರು. ಸರ್ಕಲ್​ಗಳಲ್ಲಿ ಹಾಗೂ ರೌಂಡ್ಸ್​ನಲ್ಲಿರುವ ಪೊಲೀಸರಿಗೆ ಜ್ಯೂಸ್ ನೀಡಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ್, ಜಿಲ್ಲಾಧ್ಯಕ್ಷ ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು.

Last Updated : Apr 25, 2021, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.