ಶಿವಮೊಗ್ಗ: ಅನಗತ್ಯವಾಗಿ ಓಡಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ವಿಧಿಸಿರುವ ಜನತಾ ಕರ್ಫ್ಯೂ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಜನರು ಹತ್ತು ಗಂಟೆಯ ನಂತರವೂ ಅನಗತ್ಯವಾಗಿ ಓಡಾಡುತ್ತಿದ್ದಾರೆ. ಹಾಗಾಗಿ ನಾಳೆಯಿಂದ ಸರ್ಕಾರಿ ನೌಕರರು ಸೇರಿದಂತೆ, ಕಟ್ಟಡ ಕಾರ್ಮಿಕರು, ಮೆಡಿಕಲ್ ಶಾಪ್ ನವರು ಹತ್ತು ಗಂಟೆಯ ಒಳಗಾಗಿ ತಾವು ತಲುಪುವ ಸ್ಥಳಕ್ಕೆ ಸೇರಿಕೊಳ್ಳಬೇಕು.
ಹತ್ತು ಗಂಟೆಯ ನಂತರ ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ತುರ್ತು ಸಂಧರ್ಭದಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ ಎಂದರು.
10 ಗಂಟೆ ನಂತರ ರೋಡಿಗಿಳಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕರ್ಫ್ಯೂ ವಿಧಿಸಿದ ದಿನದಿಂದ ಇಲ್ಲಿಯವರೆಗೂ 300 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ.
ಮಾಸ್ಕ್ ದಂಡ ಸಹ ವಸೂಲಿ ಮಾಡಲಾಗುತ್ತಿದೆ. ಹಾಗಾಗಿ ಯಾರೂ ಅನಗತ್ಯವಾಗಿ ಹೊರಬಾರದೆ ಸರ್ಕಾರದ ಆದೇಶ ಪಾಲಿಸಿ ಎಂದು ಮನವಿ ಮಾಡಿದ್ದಾರೆ.