ETV Bharat / state

ಲಾಕ್​ಡೌನ್ ನಿಯಮ ಉಲ್ಲಂಘಿಸಿದ 656 ಮಂದಿ ವಿರುದ್ಧ ಪ್ರಕರಣ - Shivamogga Corona News

ಲಾಕ್‌ಡೌನ್ ಉಲ್ಲಂಘನೆ ಮಾಡಿದ 10,992 ವಾಹನಗಳ ವಿರುದ್ಧ ಐಎಂವಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಎನ್​ಡಿಎಂಎ ಕಾಯ್ದೆಯಡಿ ಕ್ವಾರಂಟೈನ್ ಆದೇಶ ಉಲ್ಲಂಘಿಸಿದ 17 ಜನರ ವಿರುದ್ಧ ಕಲಂ 51 (ಬಿ) ಪ್ರಕರಣ ದಾಖಲಿಸಲಾಗಿದೆ..

Shimoga: There have been complaints filed against violators of lockdown
ಶಿವಮೊಗ್ಗ: ಲಾಕ್​ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ದಾಖಲಾದ ದೂರುಗಳು ಇಂತಿವೆ​
author img

By

Published : Jul 25, 2020, 9:30 PM IST

ಶಿವಮೊಗ್ಗ: ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ 656 ವ್ಯಕ್ತಿಗಳ ವಿರುದ್ಧ 257 ಪ್ರಕರಣ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ತಿಳಿಸಿದರು.

ಲಾಕ್​ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ದಾಖಲಾದ ದೂರುಗಳ ಮಾಹಿತಿ..​

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿದ 89 ಪ್ರಕರಣ, ಕ್ವಾರಂಟೈನ್ ಆದೇಶ ಉಲ್ಲಂಘಿಸಿದ 11, ಲಾಕ್‌ಡೌನ್ ಸಮಯದಲ್ಲಿ ಜೂಜಾಟವಾಡಿರುವ 93 ಪ್ರಕರಣ, ಅಕ್ರಮ ಮದ್ಯ ಮಾರಾಟದ 64 ಕೇಸ್‌ ದಾಖಲಿಸಲಾಗಿದೆ.

ಅಷ್ಟೇ ಅಲ್ಲ, ಲಾಕ್‌ಡೌನ್ ಉಲ್ಲಂಘನೆ ಮಾಡಿದ 10,992 ವಾಹನಗಳ ವಿರುದ್ಧ ಐಎಂವಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಎನ್​ಡಿಎಂಎ ಕಾಯ್ದೆಯಡಿ ಕ್ವಾರಂಟೈನ್ ಆದೇಶ ಉಲ್ಲಂಘಿಸಿದ 17 ಜನರ ವಿರುದ್ಧ ಕಲಂ 51 (ಬಿ) ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ನೈಟ್ ಕರ್ಪ್ಯೂ ಆದೇಶ ಉಲ್ಲಂಘಿಸಿದ 41 ಜನರ ವಿರುದ್ಧ ಕೂಡ ಎನ್​ಡಿಎಂಎ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈವರೆಗಿನ ಕೋವಿಡ್​ ನಿಯಮ ಉಲ್ಲಂಘನೆ ಕುರಿತ ಮಾಹಿತಿ ನೀಡಿದ ಅವರು, ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.