ಶಿವಮೊಗ್ಗ:ಕೊರೊನಾ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಸೋಂಕಿನಿಂದ ತಪ್ಪಿಸಿಕೊಳ್ಳಲು ಸ್ಟೀಮ್ ಮೊರೆ ಹೋಗಿದ್ದಾರೆ.
ನಗರದ ಡಿಎಆರ್ ಆವರಣದಲ್ಲಿ ಪೊಲೀಸರಿಗೆ ಸ್ಟೀಮ್ ನೀಡುವ ಕೆಲಸ ಆರಂಭಿಸಲಾಗಿದೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಹಾಗೂ ಕರ್ತವ್ಯ ಮುಗಿದ ಬಳಿಕ ಪೊಲೀಸರು ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಪೊಲೀಸರು ಕರೋನಾದಿಂದ ದೂರವಿರುವ ಪ್ರಯತ್ನ ಮಾಡುತ್ತಿದ್ದಾರೆ. ಕುಕ್ಕರ್ನಲ್ಲಿ ನೀರನ್ನು ಹಾಕಿ ಅದಕ್ಕೆ ಕಾರ್ಬಲ್ ಪ್ಲಸ್, ನೀಲಗಿರಿ ಎಣ್ಣೆ, ಬೇವಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಲಾಗುತ್ತಿದೆ. ಹೀಗೆ ಕುದಿಯಲಾರಂಭಿಸಿದ ಈ ಮಿಶ್ರಣ ಕುಕ್ಕರ್ ವಿಶಲ್ ಭಾಗದಿಂದ ಸ್ಟೀಮ್ ಆಗಿ ಹೊರ ಬರುತ್ತದೆ. ಇದಕ್ಕೆ ಪೈಪ್ ಅಳವಡಿಸಲಾಗಿದ್ದು, ಈ ಪೈಪ್ ಮೂಲಕ ಬರುವ ಸ್ಟೀಮನ್ನು ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪೊಲೀಸರ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತಿದೆ.
ಓದಿ:ದುರಂತ: ಸಿಡಿಲು ಬಡಿದು ಒಂದಲ್ಲ, ಎರಡಲ್ಲ ಬರೋಬ್ಬರಿ 20 ಆನೆಗಳ ದುರ್ಮರಣ
ಜೊತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತಿದೆ. ಕೊರೊನಾದಿಂದ ದೂರವಿರುವ ಉದ್ದೇಶದಿಂದ ಈಗಾಗಲೇ ಪೊಲೀಸರಿಗೆ ಲಸಿಕೆಯನ್ನು ನೀಡಲಾಗಿದೆ. ಆದರೂ ಪೊಲೀಸರಿಗೆ ಕೊರೊನಾ ತಗಲುವ ಅಪಾಯವೇನೂ ತಪ್ಪಿಲ್ಲ. ಹೀಗಾಗಿ ಇದೀಗ ಎಸ್ಪಿ ಲಕ್ಷ್ಮೀಪ್ರಸಾದ್ ಪೊಲೀಸರಿಗೆ ಸ್ಟೀಮ್ ವ್ಯವಸ್ಥೆ ಮಾಡುವ ಮೂಲಕ ಸಿಬ್ಬಂದಿ ರಕ್ಷಣೆಗೆ ಮುಂದಾಗಿದ್ದಾರೆ.