ETV Bharat / state

ಶಿವಮೊಗ್ಗ ಪೊಲೀಸ್ರಿಂದ ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶ

ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಗಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ್ರು ಶಿವಮೊಗ್ಗ ಪೊಲೀಸ್
author img

By

Published : Oct 11, 2019, 9:47 PM IST

ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

shimoga police seized 18 grams of jewelery
ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ್ರು ಶಿವಮೊಗ್ಗ ಪೊಲೀಸ್

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ನಗರ ಹಾಗೂ ಹಳೇ ಜೈಲು ಆವರಣದ ಬಳಿ ಮಹಿಳೆಯರ ಸರಗಳ್ಳತನ ನಡೆಸಲಾಗಿತ್ತು. ಇದರಿಂದ ಶಿವಮೊಗ್ಗ ನಗರದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಎಸ್ಪಿ ಶಾಂತರಾಜು , ಡಿವೈಎಸ್ಪಿ ಈಶ್ವರ್ ನಾಯ್ಕ ರವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಆಟೋ ಚಾಲಕ ಸಂದೀಪ್ ಎಂಬ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈತನಿಂದ 54 ಸಾವಿರ ರೂ ಮೌಲ್ಯದ ಒಟ್ಟು 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Intro:ಹಲಸೂರು ಕೆರೆ ನೀರು ಕೊಳೆತ ವಾಸನೆ- ದೇವರ ಮೂರ್ತಿಗಳ ಕಸದಲ್ಲಿ ಕಲ್ಯಾಣಿ ಸ್ಥಿತಿ ಕೇಳೋರಿಲ್ಲ!

ಬೆಂಗಳೂರು- ತಲೆಕೆಳಗಾಗಿ ಬಿದ್ದಿರುವ ದುರ್ಗಾದೇವಿ ಮೂರ್ತಿ, ಕಲ್ಯಾಣಿಯಲ್ಲಿ ನೀರಿಲ್ಲದೆ ಮೆಟ್ಟಿಲ ಮೇಲೆಯೇ ರಾಶಿಬಿದ್ದಿರುವ ದೇವರ ಮೂರ್ತಿಗಳ ಪಳೆಯುಳಿಕೆಗಳು, ಗಬ್ಬು ನಾರುತ್ತಿರುವ ಕಲ್ಯಾಣಿ, ಬೆಟ್ಟದಂತೆ ರಾಶಿ ಬಿದ್ದಿರುವ ಪಿಒಪಿ ತ್ಯಾಜ್ಯ, ಇನ್ನು ರಾಸಾಯನಿಕಗಳಿಂದ ತುಂಬಿ ಕಪ್ಪು ರಾಸಾಯನಿಕಯುಕ್ತ ನೀರು, ಸೊಳ್ಳೆ ಕಾಟದಿಂದ ಹೈರಾಣಾದ ಸ್ಥಳೀಯರು... ಇದನ್ನೆಲ್ಲ ನೋಡಿದ್ರೆ ಹಬ್ಬದ ಆಚರಣೆ ಕೆರೆಯನ್ನು ಯಾವ ಸ್ಥಿತಿಗೆ ತಂದಿದೆ ಎಂಬುದು ಗೊತ್ತಾಗುತ್ತೆ‌.
ಅಂದಹಾಗೆ ಇದು ಬೆಂಗಳೂರು ಪೂರ್ವ ವಲಯದ ವ್ಯಾಪ್ತಿಗೆ ಬರುವ ಹಲಸೂರು ಕೆರೆ.. ಬಿಬಿಎಂಪಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ರೂ, ನಗರದ ಜಲಮೂಲಗಳನ್ನು ಸ್ವಚ್ಛತೆಯಿಂದ ಕಾಪಾಡಲು ವಿಫಲವಾಗ್ತಿದೆ ಅನ್ನೋದಕ್ಕೆ ಈ ಕೆರೆಯೇ ತಾಜಾ ಉದಾಹರಣೆ..
ಗಣೇಶ ಹಬ್ಬ ಮುಗಿದು ತಿಂಗಳುಗಳೇ ಕಳೆದಿವೆ. ದಸರಾ ಹಬ್ಬವೂ ಮುಗಿದು ಮೂರು ದಿನಗಳಾಗಿವೆ. ಆದ್ರೂ ಕಲ್ಯಾಣಿ ಸ್ಥಿತಿ ಮಾತ್ರ ಶೋಚನೀಯವಾಗಿದೆ. ದೇವರ ಮೂರ್ತಿಗಳ ವಿಸರ್ಜನೆಯಾದ ಕೂಡಲೇ ಪಳೆಯುಳಿಕೆ ತೆರವು ಮಾಡಿ, ಕಲ್ಯಾಣಿ ನೀರು ಬದಲಿಸಿ, ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ಲಕ್ಷಾಂತರ ರುಪಾಯಿಗಳ ಟೆಂಡರ್ ನೀಡಿದೆ. ಆದ್ರೆ ಇದನ್ನು ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ. ಕೆರೆ ಯಾಕೆ ನಿರ್ವಹಣೆಯಾಗಿಲ್ಲ ಎಂಬ ವಿಚಾರ ಜಂಟಿ ಆಯುಕ್ತ ರವೀಂದ್ರ ಅವರಿಗೂ ಇಲ್ಲ, ಮುಖ್ಯ ಇಂಜಿನಿಯರ್ ಅಂತೂ ಸಂಪರ್ಕಕ್ಕೇ ಸಿಗೋದಿಲ್ಲ.
ಇನ್ನು ಕಳೆದ ವರ್ಷಗಳಿಂದ ಈ ವರ್ಷವೇ ಹೆಚ್ಚು ಅಚ್ಚುಕಟ್ಟಾಗಿ ಹಬ್ಬದ ಕಸ ತೆರವಾಗಿದೆ. ಗಣೇಶ ಮೂರ್ತಿಗಳ ತೆರವು ಅಂದಿನಂದೇ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಆಯುಕ್ತರಿಗೂ ಸಹ ಹಲಸೂರು ಕೆರೆಯ ಈ ದುಸ್ಥಿತಿ ಬಗ್ಗೆ ಅರಿವಿಲ್ಲ..
ಒಟ್ಟಿನಲ್ಲಿ ಅತ್ಯಂತ ವಿಸ್ತಾರವಾದ , ನಗರದ ಪ್ರಮುಖ ಕೆರೆ ಹಲಸೂರ ಕೆರೆಯೇ ನಿರ್ವಹಣೆಯಿಲ್ಲದೆ ಈ ರೀತಿಯಾಗಿದೆ. ಈ ಕೆರೆಯ ಕಲ್ಯಾಣಿ ಸ್ವಚ್ಛಗೊಳಿಸಲು ಪಾಲಿಕೆ ಇನ್ನೆಷ್ಟು ದಿನ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

ಸೌಮ್ಯಶ್ರೀ

Kn_bng_03_halasooru_lake_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.