ETV Bharat / state

ಶಿವಮೊಗ್ಗದಲ್ಲಿ ಇಂದು 229 ಸೋಂಕಿತರು ಪತ್ತೆ: 243 ಜನ ಗುಣಮುಖ

author img

By

Published : Oct 8, 2020, 9:22 PM IST

ಶಿವಮೊಗ್ಗದಲ್ಲಿಂದು 229 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 16,931 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 14,677 ಜನ ಗುಣಮುಖರಾಗಿದ್ದಾರೆ.

Shimoga
ಶಿವಮೊಗ್ಗ

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 229 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 16,931ಕ್ಕೆ ಏರಿಕೆಯಾಗಿದೆ.

ಇಂದು ಸೋಂಕಿನಿಂದ 243 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 14,677 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಂದು ಕೊರೊನಾದಿಂದ 2 ಸಾವು ಸಂಭವಿಸಿದೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 312ಕ್ಕೆ ಏರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 1,957 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 133 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​ನಲ್ಲಿ 111 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 233 ಜನ ಇದ್ದಾರೆ. ಮನೆಯಲ್ಲಿ 1,394 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 122 ಸೋಂಕಿತರಿದ್ದು, ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಜೋನ್ ಸಂಖ್ಯೆ 6,782 ಏರಿಕೆ ಆಗಿದೆ. ಇದರಲ್ಲಿ‌ 4,076 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ:

ಶಿವಮೊಗ್ಗ-80

ಭದ್ರಾವತಿ-36

ಶಿಕಾರಿಪುರ-61

ತೀರ್ಥಹಳ್ಳಿ-10

ಸೊರಬ-21

ಸಾಗರ-12

ಹೊಸನಗರ-06

ಬೇರೆ ಜಿಲ್ಲೆಯಿಂದ 03 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 4,328 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,264 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.