ಶಿವಮೊಗ್ಗ:ವಿನಯ್ ಗುರೂಜಿ ಏಳಿಗೆ ಸಹಿಸಲಾಗದ ಕೆಲವರು ಅವರ ವಿರುದ್ಧ ಷಡ್ಯಂತರ ಹೂಡುತ್ತಿದ್ದಾರೆ ಎಂದು ವಿನಯ್ ಗುರೂಜಿ ಭಕ್ತ ಶಂಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿಗೆ ವಿನಯ್ ಗುರೂಜಿ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಸುಳ್ಳು ಆರೋಪ ಮಾಡಿ ಅವರ ಹೆಸರಿಗೆ ಕಳಂಕ ತರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆರೋಪ ಮಾಡುತ್ತಿರುವವರ ಬಳಿ ಸಾಕ್ಷಿಗಳಿದ್ದರೆ ತಂದು ಸಾಬೀತು ಮಾಡಲಿ. ಅದನ್ನು ಹೊರತು ಪಡಿಸಿ ಸುಳ್ಳು ಆರೋಪ ಮಾಡುವುದರಿಂದ ಗುರೂಜಿ ಭಕ್ತರಿಗೆ ನೋವಾಗುತ್ತದೆ. ಹಾಗಾಗಿ ಇಂತಹ ಸುಳ್ಳು ಆರೋಪ ಮಾಡಿ ಗುರೂಜಿಯ ತೇಜೋವಧೆ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನ.14 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ:ಚಂದ್ರು ನಿಗೂಢ ಸಾವು ಪ್ರಕರಣ.. ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರ ಭೇಟಿ