ETV Bharat / state

ಸೈಯ್ಯದ್ ಯಾಸೀನ್ ಒಳ್ಳೆಯ ಹುಡುಗ, ಆತನ ತಲೆ ಕೆಡಿಸಲಾಗಿದೆ: ಶಾಮೀರ್ ಖಾನ್ - ಶಂಕಿತ ಉಗ್ರ ಸಯ್ಯದ್ ಯಾಸೀನ್

ಸೈಯ್ಯದ್ ಯಾಸೀನ್ ಒಬ್ಬ ಒಳ್ಳೆಯ ಹುಡುಗ ಎಂದು ಶಂಕಿತ ಉಗ್ರನ ಅಜ್ಜ ಶಾಮೀರ್ ಖಾನ್ ತಿಳಿಸಿದ್ದಾರೆ.

ಶಾಮೀರ್ ಖಾನ್
ಶಾಮೀರ್ ಖಾನ್
author img

By

Published : Sep 20, 2022, 7:57 PM IST

ಶಿವಮೊಗ್ಗ: ಸೈಯ್ಯದ್ ಯಾಸೀನ್ ಒಬ್ಬ ಒಳ್ಳೆಯ ಹುಡುಗ. ಆದರೆ, ಆತನ ತಲೆ ಕೆಡಿಸಲಾಗಿದೆ ಎಂದು ಶಂಕಿತ ಉಗ್ರ ಸಯ್ಯದ್ ಯಾಸೀನ್ ಅಜ್ಜ ಶಾಮೀರ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಸಯ್ಯದ್ ಯಾಸೀನ್ ತಂದೆ ಅಯ್ಯೂಬ್ ಖಾನ್ ವೆಲ್ಡಿಂಗ್​​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂರು ಜನ ಮಕ್ಕಳು. ಯಾಸೀನ್ ಹಿರಿಯವ. ಈತನಿಗೆ ಓರ್ವ ತಮ್ಮ ಹಾಗೂ ತಂಗಿ ಇದ್ದಾರೆ. ಯಾಸೀನ್ ಚೆನ್ನಾಗಿ ಓದುತ್ತಿದ್ದ ಕಾರಣ ಆತನನ್ನು ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿತ್ತು. ಈತ ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ 15 ದಿನಗಳ ಹಿಂದೆ ಮನೆಯಿಂದ ಸ್ನೇಹಿತರ ಜೊತೆ ಟೂರ್​ಗೆಂದು ಹೋಗಿದ್ದ. ಆದರೆ, ಈಗ ಪೊಲೀಸರು ಬಂದು ಹೇಳಿದಾಗ ನಮಗೆ ಗಾಬರಿಯಾಗಿತ್ತು.

ಸೈಯ್ಯದ್ ಯಾಸೀನ್ ಅಜ್ಜ ಶಾಮೀರ್ ಖಾನ್ ಅವರು ತಿಳಿಸಿದ್ದಾರೆ

ಆತನ ತಲೆ ಕೆಡಿಸಿದರು: ಸೈಯ್ಯದ್ ಯಾಸೀನ್ ಮೊದಲು ಚೆನ್ನಾಗಿ ಓದುತ್ತಿದ್ದು, ಆತ ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೇಲೆ ಆತನ ಮಂಗಳೂರು ಸೇರಿದಂತೆ ಇತರ ಸ್ನೇಹಿತರು ತಲೆ ಕೆಡಿಸಿದ್ದಾರೆ. ಆತ ಒಳ್ಳೆಯ ಹುಡುಗ ಎಂದು ತಿಳಿಸಿದ್ದಾರೆ.

ಕಾಣೆಯಾಗಿದ್ದ ಎಂದು ದೂರು‌ ನೀಡಿದರು: ಸೈಯ್ಯದ್ ಯಾಸೀನ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಎಂದು ಹೋಗಿದ್ದು, ಪೋನ್ ಸ್ವೀಚ್ಡ್​​ ಆಫ್ ಆಗಿದ್ದ ಕಾರಣ ಯಾಸೀನ್ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದರು ಎನ್ನಲಾಗಿದೆ.

ಓದಿ: ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್​ಪಿ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.