ಶಿವಮೊಗ್ಗ: ಶ್ರೀಗಂಧ ಕಳ್ಳತನ ಮಾಡಿ ಬೈಕ್ನಲ್ಲಿ ಸಾಗಿಸುತ್ತಿದ್ದವನನ್ನು ಬಂಧಿಸಿ, ಸುಮಾರು 37 ಕೆ.ಜಿ. ತೂಕದ 1.11 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಶಿರಾಳಕೊಪ್ಪ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಫೀಕ್ (32) ಬಂಧಿತ ಆರೋಪಿ. ಶಿರಾಳಕೊಪ್ಪ ಪಟ್ಟಣದಿಂದ ಚಿಕ್ಕಜಂಬೂರು ಗ್ರಾಮಕ್ಕೆ ಬೈಕ್ನ ಮೂಲಕ ಶ್ರೀಗಂಧ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿದ್ದಾರೆ.
1.11 ಲಕ್ಷ ರೂ. ಮೌಲ್ಯದ 37 ಕೆ.ಜಿ. 620 ಗ್ರಾಂ ತೂಕದ ಶ್ರೀಗಂಧ ಹಾಗೂ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.