ETV Bharat / state

ಶಿವಮೊಗ್ಗ: ಕಾವಾಡಿಯ ಮೇಲೆ ಮುನಿಸಿಕೊಂಡು ಅಟ್ಟಾಡಿಸಿದ ಮಣಿಕಂಠ ಆನೆ-ವಿಡಿಯೋ

author img

By

Published : Sep 11, 2022, 1:02 PM IST

ಸಕ್ರೆಬೈಲಿನ ಸಾಕಾನೆ ಮಣಿಕಂಠ ಕಾವಾಡಿ ಖಲೀಲ್ ಎಂಬವರ ಮೇಲೆ ಕೋಪಗೊಂಡಿರುವ ವಿಡಿಯೋ ಇದಾಗಿದೆ.

sakrebail manikanta elephant attack on mahout viral video
ಮಣಿಕಂಠ ಆನೆಯ ಪುಡಾಂಟ

ಶಿವಮೊಗ್ಗ: ಸಕ್ರೆಬೈಲಿನ ಸಾಕಾನೆ ಮಣಿಕಂಠ ಬಿಡಾರದಿಂದ ಕಾಡಿಗೆ ಹೊರಡುವಾಗ ತನ್ನ ಕಾವಾಡಿ ಕಲೀಲ್ ಎಂಬವರ ಮೇಲೆ ಮುನಿಸಿಕೊಂಡು ಆವರನ್ನು ಬೆನ್ನತ್ತಿದ ವಿಡಿಯೋ ದೊರೆತಿದೆ.

ಶುಕ್ರವಾರ ಮಣಿಕಂಠ ಆನೆ ಬಿಡಾರದಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಜಂಗಲ್ ರೇಸಾರ್ಟ್ ಮೂಲಕ ಕಾಡಿಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಕವಾಡಿಗನ ಕಂಡು ಇದ್ದಕ್ಕಿದ್ದಂತೆ ಕೋಪಗೊಂಡಿದೆ. ಮಣಿಕಂಠನ ಮೇಲೆ ಮಾವುತ ಇಮ್ರಾನ್ ಕುಳಿತಿದ್ದರು. ಕಲೀಲ್ ಸ್ಕೂಟಿಯಲ್ಲಿ ಹಿಂಬಾಲಿಸುತ್ತಿದ್ದರು. ರೆಸಾರ್ಟ್ ಗೇಟ್ ಬಳಿ ಕಲೀಲ್ ಬರುತ್ತಿದ್ದಂತೆ ಆತನ ಮೇಲೆ ದಾಳಿಗೆ ಮುಂದಾಗಿದೆ.‌ ಆನೆಯ ಮುನಿಸಿನ ಬಗ್ಗೆ ತಿಳಿದ ಕಲೀಲ್ ಬೈಕ್ ಬಿಟ್ಟು ಅಲ್ಲಿಂದಲೇ ಓಡಿ ಹೋಗಿದ್ದಾರೆ.

ಕಾವಾಡಿಯ ಮೇಲೆ ಮುನಿಸೇಕೆ ಮಣಿಕಂಠ?

ಮಣಿಕಂಠ ಆನೆಯು ಕಲೀಲ್ ಅವರನ್ನು ಓಡಿಸಿಕೊಂಡು ಮತ್ತೆ ಬಿಡಾರದೊಳಗೆ ಓಡಿದೆ. ನಂತರ ಬಿಡಾರದಲ್ಲಿ ಅರಿವಳಿಕೆ ಮದ್ದು ನೀಡಲಾಗಿದೆ. ಇತರೆ ಆನೆಗಳ ಸಹಾಯದಿಂದ ಮಣಿಕಂಠನನ್ನು ನಿಯಂತ್ರಣಕ್ಕೆ ತಂದು ಕಟ್ಟಿ ಹಾಕಿದ್ದಾರೆ.

ಇದನ್ನೂ ಓದಿ: ಆಹಾರ ಕೊಡ್ತಿರೋ.. ಒಳಗೆ ಬರ್ಲೋ.. ಕಾಡಾನೆ ಆರ್ಭಟಕ್ಕೆ ಬೆಚ್ಚಿಬಿದ್ದ ಬಸ್​ ಪ್ರಯಾಣಿಕರು!

ಇತ್ತೀಚೆಗೆ, ಮಣಿಕಂಠ ತನ್ನ ಮಾವುತ ಹಾಗೂ ಕಾವಡಿಗಳ ಮೇಲೆ ಕೋಪಗೊಳ್ಳುವುದು, ಇತರೆ ಆನೆಗಳ ಮೇಲೆರಗಲು ಮುಂದಾಗುವುದು ಸಾಮಾನ್ಯವಾಗಿದೆ. ಈ ಹಿಂದೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ನಡೆಸಲು ಹೋಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.