ETV Bharat / state

ಶಿವಮೊಗ್ಗದಲ್ಲಿ ಹೊಂಚು ಹಾಕಿ ರೌಡಿಶೀಟರ್​ ಹತ್ಯೆ - ಶಿವಮೊಗ್ಗದಲ್ಲಿ ರೌಡಿಶೀಟರ್​ ಕೊಲೆ

ಶಿವಮೊಗ್ಗದಲ್ಲಿ ಮನೆಗೆ ಹೋಗುತ್ತಿದ್ದ ರೌಡಿಶೀಟರ್​ನನ್ನು ಹೊಂಚು ಹಾಕಿ ಆತನ ಮನೆಯ ಬಳಿಯೇ ಕೊಲೆ ಮಾಡಲಾಗಿದೆ.

rowdy-sheeter-murdered-in-shivamogga
ಶಿವಮೊಗ್ಗದಲ್ಲಿ ಹೊಂಚು ಹಾಕಿ ರೌಡಿಶೀಟರ್​ ಹತ್ಯೆ
author img

By

Published : Oct 30, 2021, 11:28 AM IST

ಶಿವಮೊಗ್ಗ: ಹಳೆ ವೈಷಮ್ಯಕ್ಕೆ ರೌಡಿಶೀಟರ್​ವೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಗರದ ಹೊರವಲಯ ವಾದಿ - ಎ- ಹುದಾ ಬಡಾವಣೆಯ ಮೂರನೇ ತಿರುವುವಿನಲ್ಲಿ ನಿನ್ನೆ ರಾತ್ರಿ ಜೈನುದ್ದೀನ್(23) ಎಂಬಾತನನ್ನು ಹತ್ಯೆ ಮಾಡಲಾಗಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೈನುದ್ದೀನ್​​ನನ್ನು ಅದೇ ಬಡಾವಣೆಯ ರೌಡಿಶೀಟರ್ ನಕ್ಕಿ ಹಾಗೂ ಆತನ ಸ್ನೇಹಿತರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

rowdy-sheeter-murdered-in-shivamogga
ರೌಡಿಶೀಟರ್​ ಹತ್ಯೆ

ರೌಡಿಶೀಟರ್ ಜೈನುದ್ದಿನ್ ಪಂಚರ್ ಶಾಪ್ ನಡೆಸಿಕೊಂಡಿದ್ದ. ಈತ ಮನೆಗೆ ಹೋಗುತ್ತಿದ್ದಾಗ ಹೊಂಚು ಹಾಕಿ ಮನೆಯ ಬಳಿಯೇ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​​ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಗಣ್ಯಾತಿಗಣ್ಯರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.