ETV Bharat / state

ನಾಲ್ಕು ತಿಂಗಳಲ್ಲೇ ಕಿತ್ತು ಹೋದ ಕೋಟ್ಯಂತರ ವೆಚ್ಚದ ರಸ್ತೆ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 4.41 ಕೋಟಿ ರೂ ವೆಚ್ಚದಲ್ಲಿ ನಾಲ್ಕು ತಿಂಗಳ ಹಿಂದಷ್ಟೆ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಈಗ ರಸ್ತೆ ಕೈಯ್ಯಲ್ಲೇ ಕಿತ್ತು ಬರುತ್ತಿದೆ.

Road costing crores was demolished in four months
ನಾಲ್ಕು ತಿಂಗಳಲ್ಲೇ ಕಿತ್ತು ಹೋದ ಕೋಟ್ಯಾಂತರ ವೆಚ್ಚದ ರಸ್ತೆ
author img

By

Published : Oct 8, 2022, 5:37 PM IST

ಶಿವಮೊಗ್ಗ: ರಸ್ತೆ ನಿರ್ಮಾಣ‌ ಮಾಡಿದ ನಾಲ್ಕೇ ತಿಂಗಳಿಗೆ ಕಿತ್ತು ಹೋದ ಘಟನೆ ಹೊಸನಗರ ತಾಲೂಕಿನ ಗವಟೂರು ಗ್ರಾಮದಲ್ಲಿ‌ ನಡೆದಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 4.41 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳ ಹಿಂದಷ್ಟೆ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಗವಟೂರು- ಮಾವಿನಸರ ನಡುವಿನ ರಸ್ತೆ ಕಾಮಗಾರಿ ಇದ್ದಾಗಿದ್ದು, ಕಳಪೆ ಕಾಮಗಾರಿ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈಯಲ್ಲೆ ಕೀಳಬಹುದಾದ ರಸ್ತೆ: ರಸ್ತೆ ಎಷ್ಟು ಕಳಪೆಯಾಗಿದೆ ಎಂದರೆ, ರಸ್ತೆ ಕೈಯಲ್ಲೇ ಕೀಳಬಹುದಾಗಿದೆ. ಡಾಂಬಾರು ರಸ್ತೆ ಎಂದರೆ ಸರಿ ಸುಮಾರು ಹತ್ತಾರು ವರ್ಷಗಳ‌ ಕಾಲ ಬಾಳಿಕೆ ಬರಬೇಕು. ಆದರೆ, ಇಲ್ಲಿ‌ ರಸ್ತೆ ನಿರ್ಮಾಣದ ನಾಲ್ಕು ತಿಂಗಳಿಗೆ ಕಿತ್ತು ಹೋಗಿದೆ, ಎಂದರೆ ಕಾಮಗಾರಿ ಯಾವ ಗುಣಮಟ್ಟದಲ್ಲಿದೆ ಎಂಬುದು ಕಂಡು ಬಂದಿದೆ.

ನಾಲ್ಕು ತಿಂಗಳಲ್ಲೇ ಕಿತ್ತು ಹೋದ ಕೋಟ್ಯಾಂತರ ವೆಚ್ಚದ ರಸ್ತೆ

ಇದು 5.13 ಕಿ.ಮೀ ಉದ್ದದ ರಸ್ತೆಯಾಗಿದೆ. ಗುತ್ತಿಗೆದಾರನಿಗೆ‌ 2026ರ ತನಕ ರಸ್ತೆ ನಿರ್ಮಾಣ ನಿರ್ವಹಣೆ ಇದೆ. ಕುಂದಾಪುರ ಮೂಲದ ಗುತ್ತಿಗೆದಾರ ಮೇಲೆ ಗ್ರಾಮಸ್ಥರು ಕಳಪೆ ಕಾಮಗಾರಿ ನಡೆಸಿರುವ ಆರೋಪ ಮಾಡಿದ್ದಾರೆ. ಅಲ್ಲದೆ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಿರ್ಮಾಣ ಮಾಡಿ ಒಂದೇ ತಿಂಗಳಿಗೆ ಹದಗೆಟ್ಟ ಅಥಣಿ ರಸ್ತೆ... ಜನರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.