ETV Bharat / state

ಮಲೆನಾಡಿನಲ್ಲಿ ವಾಯು ಸೇನೆ ವತಿಯಿಂದ ರ‍್ಯಾಲಿ... ಅಭೂತಪೂರ್ವ ರೆಸ್ಪಾನ್ಸ್

author img

By

Published : Jul 18, 2019, 4:32 AM IST

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಾಯುಸೇನಾ ನೇಮಕಾತಿ ರ‍್ಯಾಲಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ಮೂಲಕ ಅರವತ್ತು ವರ್ಷಗಳ ಇತಿಹಾಸದಲ್ಲೇ ಎಂದೂ ಕಾಣದ ಇತಿಹಾಸವನ್ನ ನಿರ್ಮಿಸಿದ್ರು.

ಇತಿಹಾಸ ನಿರ್ಮಿಸಿದ ಅಭ್ಯರ್ಥಿಗಳು

ಶಿವಮೊಗ್ಗ: ಇದೇ ಮೊದಲ ಬಾರಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್​​ ಹಾಗೂ ಯುವಸಬಲೀಕರಣ ಮತ್ತು ಕ್ರೀಡೆ ಹೀಗೆ ಅನೇಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಚೊಚ್ಚಲ ಬಾರಿಗೆ ವಾಯುಸೇನಾ ನೇಮಕಾತಿ ರ‍್ಯಾಲಿಯನ್ನು ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

ರ‍್ಯಾಲಿಯಲ್ಲಿ ಮೊದಲನೇ ದಿನ ಉತ್ತರ ಕರ್ನಾಟಕ ಭಾಗದ ಒಂಬತ್ತು ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಾಯುಸೇನೆ ನೇಮಕಾತಿ ಪ್ರಕ್ರಿಯೆ ಆರ್ಮಿಗಿಂತ ಭಿನ್ನವಾಗಿದೆ. ನೆಹರು ಕ್ರೀಡಾಂಗಣದ ಹಾಕಿ ಅಂಕಣದಲ್ಲಿ ಮೊದಲನೇಯ ಕೌಂಟರ್​​ನಲ್ಲಿ ನೋಂದಣಿ ಮತ್ತು ನಂತರದಲ್ಲಿ ದಾಖಲೆ ಪರಿಶೀಲನೆ ಮಾಡಲಾಯಿತು. ಎಲ್ಲಾ ದಾಖಲೆಗಳು ಸರಿ ಇದ್ದವರಿಗೆ ಚೆಸ್ಟ್ ನಂಬರ್ ನೀಡಿ, ದೈಹಿಕ ಪರೀಕ್ಷೆ ನೀಡಲಾಯಿತು.

ನಂತರ ಇದರಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸ್ಟೇಡಿಯಂನ ಒಳಗೆ ಪುಶ್ ಆಪ್ಸ್​​​​​, ಸಿಟ್ ಆಪ್ಸ್​​​, ಸ್ಕ್ವಾಟ್ಸ್, ಹೈಟ್ ಪರೀಕ್ಷೆಯನ್ನ ಮಾಡಲಾಯಿತು.ಇವೆಲ್ಲದರಲ್ಲಿ ಪಾಸ್ ಆದವರಿಗೆ ಇಂಡೋರ್ ಸ್ಟೇಡಿಯಂನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.ಹೀಗೆ ಎಲ್ಲಾ ಹಂತದಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ದೈಹಿಕ ಪರಿಕ್ಷೇಗೆ ಕಳುಹಿಸಿ ಕೊಡಲಾಗುತ್ತದೆ. ಎಲ್ಲ ಹಂತಗಳನ್ನ ಪಾಸ್ ಮಾಡಿದ ಅಭ್ಯರ್ಥಿಗಳನ್ನು ವಾಯು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ.

ವಾಯು ಸೇನೆ ವತಿಯಿಂದ ರ‍್ಯಾಲಿ

ಬೆಂಗಳೂರಿನಲ್ಲಿ ರ‍್ಯಾಲಿ ನಡೆದಾಗ ಒಂದು ದಿನಕ್ಕೆ ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸುವುದು ಸಾಮಾನ್ಯ. ಆದರೆ ಮಲೆನಾಡಿನ ಈ ಭಾಗದಲ್ಲಿ ಒಂದೇ ದಿನಕ್ಕೆ ಐದು ಸಾವಿರಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿರುವುದು ಹೆಮ್ಮೆ ಅನಿಸುತ್ತಿದೆ ಎನ್ನುತ್ತಾರೆ ಸೈನಿಕ ಕಲ್ಯಾಣೆ ಇಲಾಖೆಯ ಉಪ ನಿರ್ದೇಶಕರು.

ರ‍್ಯಾಲಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತದ ವತಿಯಿಂದ ವಸತಿ ವ್ಯವಸ್ಥೆಯನ್ನ ಸಹ ಕಲ್ಪಿಸಲಾಗಿತ್ತು.ಇದರ ಜೊತೆಗೆ ರ‍್ಯಾಲಿ ನಡೆಯುವ ಸ್ಥಳದಲ್ಲಿ ಅಭ್ಯರ್ಥಿಗಳಿಗಾಗಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ಕುರಿತು ಮಾತನಾಡಿದ ಅಭ್ಯರ್ಥಿಗಳು ದೇಶ ಸೇವೆ ಮಾಡುವ ಕನಸುಗಳನ್ನ ಹೊತ್ತು ಬಂದಿದ್ದೇವೆ. ಅದಕ್ಕಾಗಿ ಕೋಚಿಂಗ್​​ಗಳನ್ನ ಪಡೆದುಕೊಂಡು ಬಂದಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ ಎಂದರು.

ಒಟ್ಟಾರೆಯಾಗಿ ದ್ವಿತೀಯ ಪಿಯುಸಿ ಮುಗಿಸಿದ 18 ರಿಂದ 23 ವಯಸ್ಸಿನ ಒಳಗಿನ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

Intro:ಶಿವಮೊಗ್ಗ,
ಪಾರ್ಮೇಟ್- ಪ್ಯಾಕೇಜ್
ಜಿಲ್ಲೆಯಲ್ಲಿ ಮೊದಲ ಬಾರಿಗೆ ವಾಯು ಸೇನೆ ವತಿಯಿಂದ ರ್ಯಾಲಿ

ಆ್ಯಂಕರ್
ದೇಶ ಸೇವೆ ಮಾಡಬೇಕು ಎನ್ನುವ ಛಲ, ಕಷ್ಟ ಪಟ್ಟು ಏನಾದರೂ ಮಾಡಿ ಈ ಪರೀಕ್ಷೆ ಯಲ್ಲಿ ಪಾಸಾದರೆ ಸಾಕು ಮುಂದಿನ ಹಂತಕ್ಕೆ ಹೋಗಬಹುದು ಎನ್ನುವ ಕನಸು ಹೀಗೆ ಅನೇಕ ಕನಸುಗಳನ್ನ ಕಟ್ಟಿಕೊಂಡು ಓಡುತ್ತಿರುವ ವಿದ್ಯಾರ್ಥಿಗಳು ಹಾಗಾಂದ್ರೆ ಏನ್ ಈ ಸ್ಟೋರಿ ಅಂತಿರಾ ಜಸ್ಟ್ ಲುಕ್

ವಾ.ಓ
ಹೌದು ಇದೆ ಮೊದಲ ಬಾರಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಸೈನಿಕ ಕಲ್ಯಾಣ ಇಲಾಖೆ,ಉದ್ಯೋಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಚೊಚ್ಚಲ ಬಾರಿಗೆ ವಾಯು ಸೇನಾ ನೇಮಕಾತಿ ರ್ಯಾಲಿ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ರ್ಯಾಲಿಯಲ್ಲಿ ಮೊದಲನೆ ದಿನ ಉತ್ತರ ಕರ್ನಾಟಕ ಭಾಗದ ಒಂಬತ್ತು ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಿದರು.

ಈ ವಾಯುಸೇನೆ ನೇಮಕಾತಿ ಪ್ರಕ್ರಿಯೆ ಆರ್ಮಿಗಿಂತ ಬಿನ್ನವಾಗಿದ್ದು. ನೆಹರು ಕ್ರೀಡಾಂಗಣದ ಹಾಕಿ ಅಂಕಣದಲ್ಲಿ ಮೊದಲನೆಯ ಕೌಟಂರ್ ನಲ್ಲಿ ನೋಂದಣಿ ಮತ್ತು ನಂತರದಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ಎಲ್ಲಾ ದಾಖಲೆ ಗಳು ಸರಿ ಇದ್ದವರಿಗೆ ಚೆಸ್ಟ್ ನಂಬರ್ ನೀಡಲಾಗುತ್ತದೆ. ಹೀಗೆ ದಾಖಲೆಗಳ ಪರಿಶಿಲನೆ ಬಳಿಕ ನೆಹರು ಕ್ರೀಡಾಂಗಣದ ಮುಂಬಾಗದ ಮುಖ್ಯ ರಸ್ತೆ ಯ ಮೂಲಕ ಡಿವಿಎಸ್ ವೃತ್ತದ ವರೆಗೂ ಮತ್ತು ಅಲ್ಲಿಂದ ಸ್ಟೇಡಿಯಂ ವರೆಗೂ ೧.೫ ಕೀಲೋ ಮೀಟರ್ ಓಟವನ್ನ ೬.೩೦ ನಿಮಿಷಗಳಲ್ಲಿ ತಲುಪಿದ ವಿದ್ಯಾರ್ಥಿಗಳು ಮೊದಲ ದೈಹಿಕ ಪರೀಕ್ಷೆ ಯಲ್ಲಿ ಪಾಸಾಗುತ್ತಾರೆ. ನಂತರದಲ್ಲಿ ಪಾಸ್ ಆದ ವಿದ್ಯಾರ್ಥಿಗಳನ್ನ ಸ್ಟೇಡಿಯಂ ಒಳಗೆ ಪುಶ್ ಆಪ್ಸ್ , ಸಿಟ್ ಆಪ್ಸ್ ,ಸ್ಕ್ವಾಟ್ಸ್, ಹೈಟ್ ಪರೀಕ್ಷೆ ಯನ್ನ ಮಾಡಲಾಗುತ್ತದೆ ಅದರಲ್ಲಿ ಪಾಸ್ ಆದವರನ್ನ ಇಂಡೋರ್ ಸ್ಟೇಡಿಯಂ ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.ಹೀಗೆ ಎಲ್ಲಾ ಹಂತದಲ್ಲಿ ಪಾಸ್ ಆದ ವಿದ್ಯಾರ್ಥಿ ಗಳನ್ನ ಬೆಂಗಳೂರಿಗೆ ದೈಹಿಕ ಪರಿಕ್ಷೇಗೆ ಕಳುಹಿಸಿ ಕೋಡಲಾಗುತ್ತದೆ.

Body:ವಾ.ಓ ೨
ಹೀಗೆ ಎಲ್ಲಾ ಹಂತಗಳನ್ನ ಪಾಸ್ ಮಾಡಿದ ವಿದ್ಯಾರ್ಥಿಗಳು ವಾಯು ಸೇನಾ ಪಡೆಗೆ ಸೆರ್ಪಡೆಗೋಳ್ಳಲಿದ್ದಾರೆ.
ಚೊಚ್ಚಲ ಬಾರಿಗೆ ಅರವತ್ತು ವರ್ಷಗಳ ಇತಿಹಾಸದಲ್ಲೆ ಎಂದು ಕಾಣದ ಇತಿಹಾಸವನ್ನ ಶಿವಮೊಗ್ಗ ದಲ್ಲಿ ಏರ್ಪಡಿಸಲಾದ ರ್ಯಾಲಿಯಲ್ಲಿ ಆಗಿದೆ. ಬೆಂಗಳೂರು ನಲ್ಲಿ ರ್ಯಾಲಿ ನಡೆದಾದ ಒಂದು ದಿನಕ್ಕೆ ಎರಡು ಸಾವಿರ ವಿದ್ಯಾರ್ಥಿ ಗಳು ಬಾಗವಹಿಸುವುದು ಹೆಚ್ಚು ಆದರೆ ಇದೆ ಮೊದಲ ಭಾರಿಗೆ ಒಂದೆ ದಿನಕ್ಕೆ ಐದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಹೆಮ್ಮೆ ಅನಿಸುತ್ತಿದೆ ಎನ್ನುತ್ತಾರೆ ಸೈನಿಕ ಕಲ್ಯಾಣೆ ಇಲಾಖೆಯ ಉಪ ನಿರ್ದೇಶಕರು
ಬೈಟ್ - ಚಂದ್ರಪ್ಪ ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು
ಬೈಟ್ - ವಿಂಗ್ ಕಮಾಂಡರ್ ಮಹೇಂದ್ರ ಸಲೇಕ್ಷನ್ ಕಮೀಟಿ

ವಾ.ಓ ೩
ರ್ಯಾಲಿ ಯಲ್ಲಿ ವಿದ್ಯಾರ್ಥಿ ಗಳಿ ಯಾವುದೇ ತೊಂದರೆ ಯಾಗದ ಆಗೆ ಜಿಲ್ಲಾಡಳಿತ ದ ವತಿಯಿಂದ ವಸತಿ ವ್ಯವಸ್ಥೆ ಯನ್ನ ಸಹ ಕಲ್ಪಿಸಲಾಗಿತ್ತು .ಇದರ ಜೊತೆಗೆ ರ್ಯಾಲಿ ನಡೆಯುವ ಸ್ಥಳದಲ್ಲಿ ವಿದ್ಯಾರ್ಥಿ ಗಳಿಗಾಗಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
ಈ ಕುರಿತು ಮಾತನಾಡಿದ ವಿದ್ಯಾರ್ಥಿಗಳು
ದೇಶ ಸೇವೆ ಮಾಡುವ ಕನಸುಗಳನ್ನ ಹೊತ್ತು ಬಂದಿದ್ದೆವೆ ಅದಕ್ಕಾಗಿ ಕೊಂಚಿಗ್ ಗಳನ್ನ ಪಡೆದುಕೊಂಡು ಬಂದಿದ್ದೆವೆ .
ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ ಎನ್ನುತ್ತಾರೆ ವಿದ್ಯಾರ್ಥಿಗಳು
ಬೈಟ್- ರವೀಂದ್ರ ರ್ಯಾಲಿಗೆ ಬಂದ ವಿದ್ಯಾರ್ಥಿ

ಬೈಟ್- ಆಕಾಶ್ ಬೆಳ್ಕೆ ರ್ಯಾಲಿಗೆ ಬಂದವರು
ಬೈಟ್- ಮನೋಜ್ ರ್ಯಲಿಗೆ ಬಂದವರು

Conclusion:ಒಟ್ಟಾರೆಯಾಗಿ
ದ್ವಿತೀಯ ಪಿಯುಸಿ ಮುಗಿಸಿದ ೧೮ ರಿಂದ ೨೩ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ರ್ಯಾಲಿ ಯಲ್ಲಿ ಭಾಗವಹಿಸುವ ಮೂಲಕ ದೇಶ ಸೇವೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ .
ರ್ಯಾಲಿಯಲ್ಲಿ ಬಾಗವಹಿಸಿದ ಎಲ್ಲಾ ಅಭ್ಯರ್ಥಿಗಳು ಆಯ್ಕೆ ಆಗಿ ದೇಶ ಸೇವೆ ಮಾಡುವಂತಾಗಲಿ ಎನ್ನುವುದೇ ನಮ್ಮ ಆಶಯ
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.