ಶಿವಮೊಗ್ಗ: ತುಂಗಾ ನದಿಯ ರೈಲ್ವೆ ಸೇತುವೆಯ ಮರುಹೊಂದಾಣಿಕೆ ಕೇವಲ ಏಳು ದಿನಗಳಲ್ಲಿ ಮಾಡಿ ರೈಲ್ವೆ ಇಲಾಖೆ ದಾಖಲೆ ಬರೆದಿದೆ. ಶಿವಮೊಗ್ಗ ಸಿಟಿಯಿಂದ ಭದ್ರಾವತಿ ಕಡೆ ಸಾಗುವ ರೈಲ್ವೆ ಬ್ರಿಡ್ಜ್ ಇದಾಗಿದೆ.
ಲಾಕ್ಡೌನ್ನಲ್ಲಿ ಯಾವುದೇ ರೈಲು ಸಂಚಾರ ಇರದೇ ಇರುವುದನ್ನು ಸದುಪಯೋಗಪಡಿಸಿಕೊಂಡ ರೈಲ್ವೆ ಇಲಾಖೆಯು 120 ಜನರನ್ನು ಬಳಸಿಕೊಂಡು ಕ್ರೇನ್ ಹಾಗೂ ಜೆಸಿಬಿ ಮೂಲಕ ಕಾಮಗಾರಿ ಮುಗಿಸಿದೆ.
ನೆಲ ಮಟ್ಟದಿಂದ 43 ಅಡಿ ಎತ್ತರದ ರೈಲ್ವೆ ಬ್ರಿಡ್ಜ್ ಅನ್ನು ಮರು ಹೊಂದಾಣಿಕೆ ಮಾಡಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸೇತುವೆಯು 25 ಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ.
![railway bridge repair work](https://etvbharatimages.akamaized.net/etvbharat/prod-images/kn-smg-08-railway-riverbridge-7204213_08052020202427_0805f_03385_1062.jpg)
ಶಿವಮೊಗ್ಗದ ತುಂಗಾ ನದಿ ರೈಲ್ವೆ ಸೇತುವೆ ಹಾಗೂ ಭದ್ರಾವತಿಯ ಭದ್ರಾ ನದಿ ಸೇತುವೆ ಕಾಮಗಾರಿ 2018ರಲ್ಲಿ ಪ್ರಾರಂಭವಾಗಿ 2020ರಲ್ಲಿ ಮುಕ್ತಾಯವಾಗಿದೆ.
![railway bridge repair work](https://etvbharatimages.akamaized.net/etvbharat/prod-images/kn-smg-08-railway-riverbrideg-7204213_08052020202523_0805f_03391_938.jpg)
1800ರಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಮೊದಲು ಮೀಟರ್ ಗೇಜ್ಗಾಗಿ ನಿರ್ಮಾಣ ಮಾಡಲಾಗಿತ್ತು. 1994ರಲ್ಲಿ ಬ್ರಾಡ್ ಗೇಜ್ ಆಗಿ ಮಾರ್ಪಡು ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ದೊಡ್ಡ ಮಟ್ಟದ ರಿಪೇರಿ ನಡೆದಿರಲಿಲ್ಲ ಎಂದು ರೈಲ್ವೆ ಇಲಾಖೆಯ ಮೈಸೂರು ವಿಭಾಗ ತಿಳಿಸಿದೆ.