ಶಿವಮೊಗ್ಗ : ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಅವರ ಮಾಹಿತಿಯನ್ನು ನೀಡುವಂತೆ ಕೋವಿಡ್-19 ಇನ್ಸಿಡೆಂಟ್ ಕಮಾಂಡೆಂಟ್ ಹಾಗೂ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕಟಣೆ ಏಕೆ? : ನಗರದಲ್ಲಿ ಕೋವಿಡ್-19 ನೋವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು ಇತರೆ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳು 14 ದಿನಗಳ ಹೊಂ ಕ್ವಾರಂಟೈನ್‍ನಲ್ಲಿ ಇರಬೇಕಾಗಿದೆ. ಆದರೆ, ಕೆಲವರು ಇದನ್ನೂ ಉಲ್ಲಂಘಿಸಿದ್ದಾರೆ.
ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ : ಅಂತಹ ವ್ಯಕ್ತಿಗಳ ಕುರಿತು ಪಾಲಿಕೆಯ ನೋಡಲ್ ಅಧಿಕಾರಿಗಳಾದ ಡಾ. ಮದಕರಿ ನಾಯಕ್ ಹೆಚ್ ವಿ 7676135028, ಬಾಲಾಜಿರಾವ್ ಹೆಚ್ ಎಂ 9901716488 ಹಾಗೂ ಸಹಾಯವಾಣಿ 18004257677 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.