ETV Bharat / state

ದುಡಿಯುವ ವರ್ಗದ ಕಾರ್ಮಿಕರಿಗೂ ಸಹಾಯಧನ ನೀಡಿ: ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ - Provide grant to workers

ಲಾಕ್​ಡೌನ್​ನಿಂದ ಇನ್ನೂ ಕೆಲವು ದುಡಿಯುವ ವರ್ಗದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ನೆರವಿಗೂ ಸರ್ಕಾರ ಧಾವಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಒತ್ತಾಯಿಸಿದ್ದಾರೆ.

Devendrappa appeals
ದುಡಿಯುವ ವರ್ಗದ ಕಾರ್ಮಿಕರಿಗೂ ಸಹಾಯ ಧನ ನೀಡಿ: ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ
author img

By

Published : May 9, 2020, 6:01 PM IST

ಶಿವಮೊಗ್ಗ: ಲಾಕ್‌ಡೌನ್ ತೊಂದರೆಗೆ ಒಳಗಾಗಿರುವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರಧನವನ್ನು ಇನ್ನೂ ಕೆಲವು ವೃತ್ತಿಪರ ಕಾರ್ಮಿಕರಿಗೂ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಒತ್ತಾಯಿಸಿದ್ದಾರೆ.

ದುಡಿಯುವ ವರ್ಗದ ಕಾರ್ಮಿಕರಿಗೂ ಸಹಾಯ ಧನ ನೀಡಿ: ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಟೋ ರಿಕ್ಷಾ ಚಾಲಕರು, ನೇಕಾರರು, ಮಡಿವಾಳರು, ಕ್ಷೌರಿಕರು, ಹೂ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಧನ ಸಹಾಯ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಅದೇ ರೀತಿ ಇನ್ನೂ ಕೆಲವು ದುಡಿಯುವ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೂ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಘೋಷಿಸಿರುವ ಕೊರೊನಾ ಪ್ಯಾಕೇಜ್ ಡಿ.ಕೆ.ಶಿವಕುಮಾರ್ ಅವರ ಶ್ರಮದ ಫಲ. ಬಡವರು, ರೈತರ ಬಗ್ಗೆ ಅವರು ಗಮನ ಹರಿಸಿ ಎಂದು ಸರ್ಕಾರದ ಗಮನ ಸೆಳೆದಿದ್ದರು. ಹಾಗಾಗಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.