ಶಿವಮೊಗ್ಗ: ರೈಲ್ವೆ ಆಟೋ ನಿಲ್ದಾಣದ ಬಳಿ ಬರುವ ಖಾಸಗಿ ಮತ್ತು ಸರ್ಕಾರಿ ನಗರ ಸಾರಿಗೆ ಬಸ್ಗಳನ್ನು ಕೆಇಬಿ ವೃತ್ತದ ಬಳಿಯೇ ನಿಲ್ಲಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ರೈಲ್ವೆ ನಿಲ್ದಾಣದ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಸುಮಾರು ವರ್ಷಗಳಿಂದ ರೈಲ್ವೆ ಸ್ಟೇಷನ್ ಆಟೋ ನಿಲ್ದಾಣದಲ್ಲಿ ನಾವುಗಳು ಆಟೋ ಸೇವೆ ಸಲ್ಲಿಸಿ ಜೀವನ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸರ್ಕಾರಿ ಮತ್ತು ನಗರ ಖಾಸಗಿ ಬಸ್ಗಳು ರೈಲ್ವೆ ನಿಲ್ದಾಣದ ಬಳಿ ಬಂದು ನಿಲ್ಲುತ್ತಿವೆ. ಹೀಗೆ ಬಸ್ಸು ಬಂದು ನಿಲ್ಲುವುದರಿಂದ ಆಟೋ ಬಾಡಿಗೆ ದೊರೆಯುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ರೈಲ್ವೆ ನಿಲ್ದಾಣದ ಬಳಿ ಸಿಟಿ ಬಸ್ ಬರುವುದರಿಂದ ಆಟೋ ಬಾಡಿಗೆ ಸಿಗದೇ ಖಾಲಿ ಕೂತಿದ್ದೇವೆ. ಹಾಗಾಗಿ ನಗರ ಸಾರಿಗೆ ಬಸ್ಗಳನ್ನು ಕೆಇಬಿ ಸರ್ಕಲ್ ಬಳಿ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.